ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬರುವ ದಿನಗಳು ರೈತ ಸಮುದಾಯಕ್ಕೆ ಆಶಾದಾಯಕ: ದೇಶಿಕೇಂದ್ರ ಶ್ರೀ ಭವಿಷ್ಯ

Rashmi Kasaragodu
Updated On : 8 Apr 2013, 11:57 am

ಕ.ಪ್ರ. ವಾರ್ತೆ೤ ಅರಸೀಕೆರೆ೤ ಏ.8
ಸತತ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತ ಸಮುದಾಯಕ್ಕೆ ಬರುವ ದಿನಗಳು ಆಶಾದಾಯಕವಾಗಲಿದೆ ಎಂದು ಚಿಕ್ಕನಾಯಕನಹಳ್ಳಿ ತಾ. ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ತಾ. ಕಾಟೀಕೆರೆ ಹಾಗೂ ಸಂಕೋಡನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಭಕ್ತರೊಂದಿಗೆ ಮಾತನಾಡಿ, ಯಾವುದೇ ನೀರಾವರಿ ಇಲ್ಲದೆ ಮಳೆಯನ್ನೇ ಆಶ್ರಯಿಸಿ ಬದುಕುತ್ತಿರುವ ರೈತ ಸಮುದಾಯಕ್ಕೆ ಕಳೆದೆರೆಡು ವರ್ಷಗಳಿಂದ ನಿರೀಕ್ಷಿತ ಮಳೆ ಬಾರದೆ ಇರುವುದು ಅವರನ್ನು ಸಂಕಷ್ಟಕ್ಕೀಡು ಮಾಡಿದೆ. ವಾತಾವರಣದಲ್ಲಿ ಅಲ್ಪ ಮಟ್ಟಿನ ಬದಲಾವಣೆಗಳು, ಏರಿಳಿತಗಳು ಕಂಡುಬಂದಿದ್ದು, ಬರಲಿರುವ ದಿನಗಳಲ್ಲಿ ಉತ್ತಮ ಮಳೆಯಾಗಿ ರಾಜ್ಯ ಸುಭಿಕ್ಷವಾಗಲಿದೆ. ರೈತ ಸಮುದಾಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.
ಮತದಾನ ಒಂದು ಪವಿತ್ರ ಕಾರ್ಯ ಹಾಗೂ ಕರ್ತವ್ಯವಾಗಿದ್ದು ಎಲ್ಲರೂ ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಕಿವಿಮಾತು ಹೇಳಿದರು.
ಗ್ರಾಮದ ಮುಖಂಡ ಸಣ್ಣೇಗೌಡ, ಎಸ್.ಟಿ.ಮಹಾಲಿಂಗಪ್ಪ, ಎಸ್.ಎನ್.ತಿಮ್ಮೇಗೌಡ, ಈಶ್ವರಪ್ಪ, ನೀಲಕಂಠಪ್ಪ, ಪ್ರಕಾಶ್, ಷಡಾಕ್ಷರಿ, ಗಂಗಾಧರಸ್ವಾಮಿ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement