ಮತದಾರರ ಹೆಸರು ನೋಂದಣಿಗೆ ಸೂಚನೆ
ಹಾಸನ: ಚುನಾವಣಾ ಆಯೋಗದ ಆದೇಶದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಮತದಾರರಾಗುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2013ರ ಚುನಾವಣೆಗೆ ನಿಯೋಜಿಸಲಾಗಿರುವ ಮತಗಟ್ಟೆ ಅಧಿಕಾರಿಗಳು ಮತದಾರರಾಗ ಬೇಕಾಗಿರುವುದರಿಂದ ಈವರೆವಿಗೂ ಮತದಾರರಾಗಿಲ್ಲದಿದ್ದರೆ, ನಿಗದಿತ ನಮೂನೆ-6 ರಲ್ಲಿ ಅರ್ಜಿ ನೀಡಿ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಎಲ್ಲಾ ನೌಕರರು ಮತದಾರರಾಗಿರುವ ಬಗ್ಗೆ ಆಯಾ ಕಚೇರಿಗಳಿಗೆ ಮತದಾರರ ಗುರುತಿನ ಚೀಟಿ ಪ್ರತಿ ನೀಡಲು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ನೀಡಲಾಗಿರುವ ನೌಕರರ ಸೇವಾ ಮಾಹಿತಿಯಲ್ಲಿ ಅಪೂರ್ಣಗೊಳಿಸಲಾಗಿದ್ದ ಕಾಲಂಗಳನ್ನು ಭರ್ತಿ ಮಾಡಿ ಏ.9 ರೊಳಗೆ ಮುದ್ದಾಂ ಆಗಿ ನೀಡಲು ಇಲಾಖಾ ನೌಕರರಿಗೆ ಮತ್ತು ಅಧಿಕಾರಿ ವರ್ಗದವರಿಗೆ ತಹಸೀಲ್ದಾರರು ಹಾಗೂ ಸಹಾಯಕ ಚುನಾವಣಾಧಿಕಾರಿ ಸೂಚಿಸಿದ್ದಾರೆ