ಅಂಬೇಡ್ಕರ್ ಜಯಂತಿ ಆಚರಣೆ
ಹೊಳೆನರಸೀಪುರ: ಡಾ.ಬಾಬೂ ಜಗಜೀವನರಾಂ ಅವರ 116ನೇ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜಯಂತಿ ಆಚರಿಸುವ ಕುರಿತಂತೆ ಮಾ.30ರಂದು ತಾಲೂಕು ಕಚೇರಿಯಲ್ಲಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸದಂತೆ, ಏ.14ರಂದು ತಹಸೀಲ್ದಾರ್ ಅವರ ಕಚೇರಿಯಲ್ಲಿ ಆಚರಿಸಲು ತೀರ್ಮಾನಿಸಿದೆ. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಈ ಕಾರ್ಯಕ್ರಮವನ್ನು ತಪ್ಪದೇ ಸರಳವಾಗಿ ಆಚರಿಸಿ ನಂತರ ತಾಲೂಕು ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರೂ ಆದ ತಹಸೀಲ್ದಾರ್ ಕೆ.ಪಿ.ಈಶ್ವರಪ್ಪ ತಾಲೂಕಿನ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೋಶಾಲೆ ಆರಂಭ
ಅರಸೀಕೆರೆ: ತಾಲೂಕಿನ ಪ್ರಸ್ತುತ ಬರಗಾಲದಲ್ಲಿ ಬಾಣಾವರ ಹೋಬಳಿಯಲ್ಲಿ ತೀವ್ರ ಬರಗಾಲದ ಸಂಕಷ್ಟ ಎದುರಿಸುತ್ತಿರುವ ಕಾರಣ ಜಾನುವಾರುಗಳಿಗೆ ಮೇವು ನೀರಿನ ಕೊರತೆ ಅಧಿಕವಾಗಿ ಕಂಡು ಬಂದಿರುವುದನ್ನು ಜಿಲ್ಲಾಧಿಕಾರಿಗಳ ಅರಿತು ಅವರ ಆದೇಶದ ಮೇರೆಗೆ ಏಪ್ರಿಲ್ 8 ರಿಂದ ಒಂದು ತಿಂಗಳ ಕಾಲ ಬಾಣಾವರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರೈತರಿಗೆ ಉಚಿತವಾಗಿ ತಮ್ಮ ದನಕರುಗಳ ಪಾಲನೆಗೆ ಮೇವನ್ನು ನೀಡಲು ಗೋಶಾಲೆಯನ್ನು ತೆರೆಯಲಾಗಿದೆ.