ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೊಸೆಗೆ ವಿಷ ಇಟ್ಟು ಕೊಂದ ಅತ್ತೆ, ಮಾವ!

Rashmi Kasaragodu
Updated On : 10 Apr 2013, 12:19 pm

ಕನ್ನಡಪ್ರಭ ವಾರ್ತೆ   ಹೊಳೆನರಸೀಪುರ   ಏ.9
ಪೊಲೀಸ್ ಕಾನ್ಸ್ಟೇಬಲ್ ಆಗಿರುವ ತಮ್ಮ ಪುತ್ರನಿಗೆ ವರದಕ್ಷಿಣೆಯಾಗಿ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಗಂಡನ ಅತ್ತೆ-ಮಾವ ಸೇರಿಕೊಂಡು ಬೆಳಗಿನ ತಿಂಡಿಯಲ್ಲಿ ವಿಷ ಇಟ್ಟು ಸೊಸೆಯನ್ನು ಕೊಂದ ಘಟನೆ ತಾಲೂಕಿನ ಗಡಿಭಾಗ ಬೆಟ್ಟಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬೆಟ್ಟಳ್ಳಿ ಗ್ರಾಮದ ಶಿವಲಿಂಗಯ್ಯ, ಜಯಮ್ಮ ಅವರ ಮಗ ಬೆಂಗಳೂರಿನಲ್ಲಿ ಕಾನ್ಸ್ಟೇಬಲ್ ಆಗಿರುವ ಪುಟ್ಟರಾಜುಗೆ ತಾಲೂಕಿನ ಮರಹಳ್ಳಿ ಗ್ರಾಮದ ಪ್ರಭಾಕರ, ತಾಯಮ್ಮ ಅವರ ಮಗಳು ಮಧು ಎಂಬಾಕೆಯನ್ನು ಕಳೆದ ಹತ್ತು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದ ಒಂದೆರಡು ತಿಂಗಳು ಪೇದೆ ಪುಟ್ಟರಾಜು ಬೆಂಗಳೂರಿಗೆ ಕರೆದುಕೊಂಡು ಹೋಗಿ ಸಂತೋಷದಿಂದ ಇದ್ದರು. ಆದರೆ ಪುಟ್ಟರಾಜು, ಆತನ ತಂದೆ ಶಿವಲಿಂಗಯ್ಯ, ತಾಯಿ ಜಯಮ್ಮ ಅವರಿಗೆ ಏನಾದರೂ ಮಾಡಿ ಸೊಸೆ ಮನೆಯಿಂದ ಮತ್ತಷ್ಟು ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದರು. ಮದುವೆ ವೇಳೆ ವರದಕ್ಷಿಣೆಯಾಗಿ ಮೂರು ಲಕ್ಷ ನಗದು, 150 ಗ್ರಾಂ ಚಿನ್ನದ ಒಡವೆಗಳನ್ನು ಕೊಟ್ಟಿದ್ದರು ಸಹ ದುರಾಸೆಯಿಂದ ಮಗನಿಗೆ ಬೈಕ್ ಕೊಡಿಸುವಂತೆ ಒತ್ತಾಯಿಸುತ್ತಿದ್ದರು.
 ಕಳೆದ ಗುರುವಾರ ಮನೆಯವರೆಲ್ಲ ಪುಟ್ಟರಾಜು ಮತ್ತು ಕುಟುಂಬದವರನ್ನು ಸಮಾಧಾನ ಮಾಡಲಾಗಿತ್ತು ಎಂದು ಮಧುವಿನ ತಂದೆ ಪ್ರಭಾಕರ್ ತಿಳಿಸಿದ್ದಾರೆ.
ಆದರೆ ಮಂಗಳವಾರ ಬೆಳಗ್ಗೆ ಮನೆಯಲ್ಲಿ ಅತ್ತೇ ಜಯಮ್ಮ, ಮಾವ ಶಿವಲಿಂಗಯ್ಯ ಅವರು ತಿಂಡಿಯಲ್ಲಿ ತಂಬಾಕಿನ ಬೆಳೆಗೆ ಹೊಡೆಯುವ ವಿಷವನ್ನು ಬೆರೆಸಿ ಬಲವಂತದಿಂದ ತಿನ್ನಿಸಿದ್ದಾರೆ ಎಂದು ಮೃತಪಟ್ಟಿರುವ ಮಧು ಕುಟುಂಬದವರು ಆರೋಪಿಸಿದ್ದಾರೆ. ಇತ್ತೀಚೆಗೆ ಪುಟ್ಟರಾಜು ಮಧುವಿಗೆ ಮಾನಸಿಕ ಕಿರುಕುಳದ ಜತೆಗೆ ಆಕೆಯ ಮೈಮೇಲೆ ಬರೆ ಎಳೆಯುವುದು. ಆಕೆಯ ಕೈಬೆರಳಿನ ಉಗುರುಗಳನ್ನು ಬಲವಂತವಾಗಿ ಕಿತ್ತು ವಿಚಿತ್ರವಾಗಿ ನಡೆದುಕೊಳ್ಳುವುದನ್ನು ಆರಂಭಿಸಿದ್ದನೆಂದು ಮಧುವಿನ ತಾಯಿ ಛಾಯಾದೇವಿ ತಿಳಿಸಿದ್ದಾರೆ. ಪುಟ್ಟರಾಜು ಪ್ರಸ್ತುತ ಬೆಂಗಳೂರಿನಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement