ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೊಳವೆ ಬಾವಿ ಸಂಬಂಧ ಗುಂಪು ಘರ್ಷಣೆ: ಗಾಯ

Mainashree
Updated On : 11 Apr 2013, 12:50 pm

ಕನ್ನಡಪ್ರಭ ವಾರ್ತೆ  ಅರಸೀಕೆರೆ  ಏ.10
ತಾಲೂಕಿನ ಮೇಳೇನಹಳ್ಳಿಯಲ್ಲಿ ಕೊಳವೆ ಬಾವಿ ಕೊರೆಯಿಸುವ ಸಂಬಂಧ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಗಾಯ ಗೊಂಡಿರುವವರನ್ನು ಪಟ್ಟಣದ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ.
 ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಪಂ ವತಿಯಿಂದ ಗ್ರಾಮಕ್ಕೆ ಕೊಳವೆ ಬಾವಿ ಕೊರೆಯಲು ಲಾರಿ ಆಗಮಿಸಿದ ವೇಳೆ ಪ್ರತ್ಯೇಕ ಸ್ಥಳಗಳಲ್ಲಿ ಕೊಳವೆ  ಬಾವಿ ಕೊರೆಯುವಂತೆ ಎರಡು ಗುಂಪಿನವರೂ ಪಟ್ಟು ಹಿಡಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.   ಗ್ರಾಮದ ಲಕ್ಷ್ಮಮ್ಮ ಹಾಗೂ ದಿನೇಶ್ ಎಂಬುವವರನ್ನು ಮತ್ತೊಂದು ಗುಂಪಿನವರು ಥಳಿಸಿದ್ದಾರೆ. ಘಟನೆ ರಾಜಕೀಯ ಸ್ವರೂಪ ಪಡೆಯತೊಡಗಿದ್ದು,
 ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎನ್ನಲಾಗುತ್ತಿದ್ದು ಪೊಲೀಸ್ ತನಿಖೆ ನಂತರ ಸತ್ಯ ಹೊರಬೀಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement