ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಯಲ್ಲಿ ಕೆಜೆಪಿಯೇ ಪರ್ಯಾಯ: ವಿಶ್ವನಾಥ್

Mainashree
Updated On : 11 Apr 2013, 12:49 pm

ಕನ್ನಡಪ್ರಭ ವಾರ್ತೆ  ಆಲೂರು  ಏ.10
ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಕೆಜೆಪಿ ಪಕ್ಷ ಉದಯವಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಎಂ.ವಿಶ್ವನಾಥ್ ತಿಳಿಸಿದರು.
  ಪಟ್ಟಣದ ಶಾಂಭವಿ ಯೋಗೇಶ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಜೆಪಿ ನಿಜವಾದ ಜಾತ್ಯತೀತ ಪಕ್ಷವಾಗಿದ್ದು, ನಾಯಕ ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಶತಃಸಿದ್ಧ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಲೂರಿನಲ್ಲಿ 11 ಸ್ಥಾನಗಳ ಪೈಕಿ 6 ಸ್ಥಾನ ಗಳಿಸಿದಂತೆ ಎಲ್ಲರೂ ಒಗ್ಗೂಡಿ ಕೆಜೆಪಿ ಅಭ್ಯರ್ಥಿ ಉಮೇಶ್ ಗೆಲುವಿಗೆ ಶ್ರಮಿಸಬೇಕೆಂದರು.
 ಕೆಜೆಪಿ ರಾಜ್ಯ ಕಾರ್ಯದರ್ಶಿ ಬಿ.ಆರ್. ಗುರುದೇವ್ ಮಾತನಾಡಿ, ದೀನ ದಲಿತರರ, ದುರ್ಬಲರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಯಡಿಯೂರಪ್ಪನವರ ಕೈ ಬಲಪಡಿಸುವ ಸಲುವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಈ ಬಾರಿ ಕೆಜೆಪಿ ಅಭ್ಯರ್ಥಿಯನ್ನು ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
  ರಾಜ್ಯದಲ್ಲಿ ಯಾವ ತಾಲೂಕುಗಳಲ್ಲಿಯೂ ಸಮಿತಿ ರಚಿಸಿಲ್ಲ. ಆಲೂರಿನಲ್ಲಿ ಮಾತ್ರ ತಕ್ಷಣವೇ ಕಮಿಟಿ ರಚಿಸುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. ವಿಷಯವನ್ನು ತಿಳಿದುಕೊಳ್ಳದೆ ಮಾತನಾಡುವುದು ಮೂರ್ಖತನ. ಈಗ ನಮ್ಮ ಮುಂದಿರುವ ಏಕೈಕ ಗುರಿ ಬೆಳಗೋಡು ಉಮೇಶ್ ಅವರ ಗೆಲವು ಎಂದು ಹೇಳಿದರು.
  ಅಭ್ಯರ್ಥಿ ಉಮೇಶ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ನಿಂತ ನೀರಾಗಿದೆ. ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿವೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ ಯಡಿಯೂರಪ್ಪ ಕಟ್ಟಿದ ಕೆಜೆಪಿಯೊಂದೇ ನಿಜವಾದ ಜಾತ್ಯತೀತ ಪಕ್ಷವಾಗಿದ್ದು, ಸ್ಥಳೀಯ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿದರೆ ಯಾವೊಂದು ಕಪ್ಪುಚುಕ್ಕಿ ಬಾರದಂತೆ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
  ಕಟ್ಟಾಯ ತಿಮ್ಮಯ್ಯ, ನಿರ್ವಾಣಯ್ಯ, ಎ.ಬಿ.ನಾಗರಾಜ್, ನಾಕಲಗೂಡು ರಾಜಯ್ಯ, ಪಪಂ ಸದಸ್ಯ ದಡದಳ್ಳಿ ಜಯಣ್ಣ, ಎಚ್.ಪಿ.ನಂದೀಶ್, ಮಂಜು ಹಾಗೂ ಕಾರ್ಯಕರ್ತರು ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement