'ಜೆಡಿಎಸ್ ಸೇರಿಲ್ಲ; ಕಾಂಗ್ರೆಸ್ನಲ್ಲೇ ಇರೋದು'
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ, ಏ.10
ತಮ್ಮ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮದ ಸಭೆ ನಡೆಯುತ್ತಿದೆ. ತಾವು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಒತ್ತಾಯಿಸಿ ತಮ್ಮನ್ನು ಕರೆದೊಯ್ದು ಸಭೆಯಲ್ಲಿ ತಾವು ಜೆಡಿಎಸ್ ಸೇರಿದ್ದಾರೆಂದು ಘೋಷಣೆ ಮಾಡಿದರು. ಆದರೆ ನಾನು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಲ್ಲ ಎಂದು ಕೆಂಬಾಳು ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ತಿಳಿಸಿದರು. ಏ.4ರಂದು ತಮ್ಮ ಗ್ರಾಮಕ್ಕೆ ಜೆಡಿಎಸ್ ಮುಖಂಡ ಸಿ.ಎನ್. ಬಾಲಕೃಷ್ಣ ಆಗಮಿಸಿದ ಸಂದರ್ಭದಲ್ಲಿ ಕೆಲ ಯುವಕರು ಕರೆದೊಯ್ದು ತಾವು ಜೆಡಿಎಸ್ ಸೇರುತ್ತಿರುವುದಾಗಿ ಹೇಳಿದರು. ಆದರೆ ತಮ್ಮಿಂದ ಒಪ್ಪಿಗೆ ಮಾತು ತೆಗೆದುಕೊಳ್ಳದೆ ಏಕಾಏಕಿ ಈ ರೀತಿ ಮಾಡಿದರು. ತಕ್ಷಣವೇ ತಾವು ಅದನ್ನು ವಿರೋಧಿಸಿ ತಾವು ಕಾಂಗ್ರೆಸ್ನಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದೆ ಎಂದ ಅವರು, ಸಿ.ಎನ್. ಬಾಲಕೃಷ್ಣ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆಂದರು.