ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪುರಸಭೆ ಎಂಜಿನಿಯರ್ ನಿರ್ಲಕ್ಷ್ಯ: ಪಟ್ಟಣದಲ್ಲಿ ಕುಡಿಯೋಕ್ಕೂ ನೀರಿಲ್ಲ'

Mainashree
Updated On : 11 Apr 2013, 12:51 pm

ಕ.ಪ್ರ. ವಾರ್ತೆ, ಸಕಲೇಶಪುರ, ಏ.10
ಪುರಸಭೆಯ ಎಂಜಿನಿಯರ್ ಪ್ರಭಾದೇವಿ ನಿರ್ಲಕ್ಷ್ಯದಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿಗೂ ಹಾಹಾಕಾರ ಬಂದಿದೆ ಎಂದು ಪುರಸಭೆಯ ಕಾಂಗ್ರೆಸ್ ಸದಸ್ಯರು ಅರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ಸಯ್ಯದ್ ಮುಫಿಜ್, ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ 8 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿದ್ದರೂ ಒಂದು ತಿಂಗಳಿಂದ ಕುಡಿಯುವ ನೀರನ್ನು ನೀಡಲಾಗುತ್ತಿಲ್ಲ ಎಂದರೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಇದಕ್ಕೆ ಈ ಹಿಂದೆ ಆಡಳಿತ ನಡೆಸಿರುವ ಜೆಡಿಎಸ್ ಪಕ್ಷ ಪ್ರಮುಖ ಕಾರಣವಾಗಿದೆ. ಜತೆಗೆ ಅಧಿಕಾರಿಗಳು ಸಹ ಹೊಣೆಯಾಗಿದ್ದಾರೆ ಮುಖ್ಯವಾಗಿ ಪುರಸಭೆಯ ಎಂಜಿನಿಯರ್ ಪ್ರಭಾದೇವಿ  ಎಂದು ಟೀಕಿಸಿದರು.
ಹೇಮಾವತಿ ನದಿಯನ್ನು ತಡೆದು ಚೆಕ್ ಡ್ಯಾಂ ನಿರ್ಮಿಸಲಾಗಿದೆ. ನದಿಯಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ, ಇಲ್ಲಸಲ್ಲದ ತಾಂತ್ರಿಕ ಕಾರಣಗಳನ್ನು ನೀಡಲಾಗುತ್ತಿದೆ ಎಂದರು.
ನೀರು ವಿತರಿಸುವ ಯಂತ್ರಗಳು ಕೆಟ್ಟುಹೋಗಿವೆ ಎಂದು ಸಬೂಬು ಹೇಳುತ್ತಾರೆ. ನಮಗೆ ಅಗತ್ಯವಾಗಿರುವ ನೀರನ್ನು ನೀಡಲಾಗದ ಅಧಿಕಾರಿಗಳು ಇಲ್ಲಿ ಏಕಿರಬೇಕು? ಇಲ್ಲಿಂದ ತೊಲಗಲಿ ಎಂದು ಹೇಳಿದರು.
ನೀರಿನ ಸಮಸ್ಯೆ ವಿರೋಧಿಸಿ ಸದ್ಯದಲ್ಲೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆಯ ಕಾಂಗ್ರೆಸ್ ಸದಸ್ಯರಾದ ಸುಮಿತ್ರ, ಕಾಳಿಂಗಪ್ಪ, ಪದ್ಮ, ಶೋಭ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement