ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೋಟಮ್ಮ ಅಥವಾ ಸಣ್ಣಸ್ವಾಮಿಗೆ ಟಿಕೆಟ್‌ನೀಡಲು ಒತ್ತಾಯ

Mainashree
Updated On : 11 Apr 2013, 12:49 pm

ಕನ್ನಡಪ್ರಭ ವಾರ್ತೆ  ಹಾಸನ  ಏ 10
ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಮೋಟಮ್ಮ ಅಥವಾ ಡಿ.ಸಿ.ಸಣ್ಣಸ್ವಾಮಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಪುರಸಭೆ ಮಾಜಿ ಸದಸ್ಯೆ ಕೌಸಲ್ಯ ಲಕ್ಷ್ಮಣಗೌಡ ಒತ್ತಾಯಿಸಿದ್ದಾರೆ.
 ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ ಮೋಟಮ್ಮ ಅಥವಾ ಡಿ.ಸಿ.ಸಣ್ಣಸ್ವಾಮಿ ಅವರನ್ನು ಬಿಟ್ಟು ಡಿ.ಮಲ್ಲೇಶ್‌ಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್  ನೀಡದೆ ಸೋಲುವ ಅಭ್ಯರ್ಥಿಗೆ ನೀಡಿದ್ದಾರೆ. ಇದರಿಂದ ಖಂಡಿತ ಪಕ್ಷಕ್ಕೆ ಕ್ಷೇತ್ರದಲ್ಲಿ ಹಿನ್ನೆಡೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 ಡಿ.ಸಿ.ಸಣ್ಣಸ್ವಾಮಿ ಸಾಕಷ್ಟು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಅಂತವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ವರಿಷ್ಠರು ಇನ್ನಾದರೂ ನಿರ್ಧಾರ ಬದಲಿಸಿ ಕೊಳ್ಳದಿದ್ದಲ್ಲಿ ಕೂಡಲೇ ಈ ವಿರುದ್ಧ ಎಲ್ಲಾ ಮುಖಂಡರು ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಸಕಲೇಶಪುರ ತಾಲೂಕು ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಬಿ.ಬಿ.ಸುಂದರಮ್ಮ, ನಿರ್ಮಲಾ ಪವಿತ್ರನ್, ಜಾನಕಿ, ರಾಜಮ್ಮ ಇತರರು ಇದ್ದರು.
5 ಸಾವಿರ ನೋಂದಣಿ
ಹೊಳೆನರಸೀಪುರ: ಪ್ರಸಕ್ತ ವಿಧಾನಸಭೆ ಚುನಾವಣೆ ಮತದಾರರ ನೋಂದಣಿ ಕಾರ್ಯ ಮುಕ್ತಾಯವಾಗಿದ್ದು ಸುಮಾರು ಹೊಸ ಮತದಾರರ ಸಂಖ್ಯೆ ಐದು ಸಾವಿರ  ದಾಟುವ ಸಂಭವ ಇದೆ ಎಂದು ತಾಲೂಕಿನ ಚುನಾವಣಾಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement