ಗುಂಪು ಘರ್ಷಣೆ: 20ಕ್ಕೂ ಹೆಚ್ಚು ಮಂದಿ ಬಂಧನ
ಆಲಮೇಲ: ಬಳಗಾನೂರ ಗ್ರಾಮದಲ್ಲಿ ಶುಕ್ರವಾರ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಒಟ್ಟು 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಗ್ರಾಮದ ಕುರ್ಸಿದಬಾನು ಲಾಲಸಾಬಾ ಸುಂಕ, ಹಸೀನಾಬಾನು ಲಾಲಸಾಬ ನದಾಫ, ಲಾಳೆಸಾಬಾ ದಸಗೀರಸಾಬ ಮಾಳಕೋಟಗಿ ಹಾಗೂ ಬಾಬು ಗುಡುಸಾಬ ಕಲಾಲ ಎಂಬುವವರು ನೀಡಿದ ದೂರಿನಯ್ವಯ ಘಟನೆಗೆ ಸಂಬಂಧಪಟ್ಟಂತೆ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈ ಸಂಧರ್ಭದಲ್ಲಿ ಕೇಸುರಾವ ಕುಲಕರ್ಣಿ, ಗ್ರಾಪಂ ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ, ತಾಪಂ ಸದಸ್ಯ ಛಾಯಪ್ಪ ದೇವರಮನಿ, ಶರಣಪ್ಪ ಚೋಗುರ, ಕೆಂಚಪ್ಪ ಡೋಗುರ, ಮಾಳಪ್ಪ ಡೋಗುರ, ಕೆಂಚಪ್ಪ ಗಡ್ಡದ, ಕೇದಾರಲಿಂಗ ಡೋಗುರ, ಶರಣು ಮನಗೂಳಿ, ಶಿವಶರಣ ಸಾತಿಹಾಳ, ಸಿದ್ದಪ್ಪ ನಾಟೀಕಾರ, ಗುರಪ್ಪ ಹಳ್ಳೂರ, ಶ್ರೀಶೈಲ ಕಣ್ಣೂರ, ಶ್ರೀಶೈಲ ತಳವಾರ, ರಮೇಶ ನಾಟೀಕಾರ, ನಾಗಪ್ಪ ಡೋಗುರ, ದೇವಪ್ಪ ತಿಪ್ಪರಗೋಳ, ಶ್ರೀಮಂತ ಜಂಬಗಿ ಎಂಬವರನ್ನು ಬಂಧಿಸಿ, ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
ಕ್ಷುಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಶುಕ್ರವಾರ ನಡೆದ ಘರ್ಷಣೆಯಲ್ಲಿ 12ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು.
ಗ್ರಾಮ ಈಗ ಶಾಂತತೆಯಿಂದ ಕೂಡಿದ್ದು ಸೂಕ್ತ ಬಂದುಬಸ್ತ್ಗಾಗಿ ಸುಮಾರು 100ಕ್ಕೂ ಹೆಚ್ಚು ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.