ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತಪಟ್ಟಿ ಸೇರ್ಪಡೆಗೆ 10,955 ಮತದಾರರ ಅರ್ಜಿ

Vishwanath S
Updated On : 12 Apr 2013, 10:20 am

ಕನ್ನಡಪ್ರಭ ವಾರ್ತೆ , ಅರಸೀಕೆರೆ , ಏ.12
ಕ್ಷೇತ್ರದಲ್ಲಿನ ಒಟ್ಟು 265 ಮತಗಟ್ಟೆಗಳಲ್ಲಿ ಅತಿಸೂಕ್ಷ್ಮ 66  ಮತಗಟ್ಟೆಗಳು, ಸೂಕ್ಷ್ಮ 72 ಮತಗಟ್ಟೆಗಳು ಹಾಗೂ ಸಾಮಾನ್ಯ 127 ಮತಗಟ್ಟೆಗಳಿದ್ದು, 1,87,886  ಮತದಾರರ ಜೊತೆಗೆ ಹೊಸದಾಗಿ 10,955  ಮತದಾರರು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಬಿ.ಶಿವರಾಜ್ ತಿಳಿಸಿದರು.
  ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ವಿಧಾನಸಭಾ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ  ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು.
  ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಸಂಚಾರಿ ದಳವನ್ನು ರಚಿಸಿದ್ದು, ಕಸಬಾ ಹೋಬಳಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜಣ್ಣ, ಕಣಕಟ್ಟೆ ಹೋಬಳಿಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ್, ಗಂಡಸಿ ಹೋಬಳಿಗೆ ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ್, ಬಾಣಾವರ ಹೋಬಳಿಗೆ ಸಹಕಾರ ಅಭಿವೃದ್ಧಿ ಇಲಾಖೆ ಅಧಿಕಾರಿ ದಯಾನಂದ್ ಅವರುಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ತಿಳಿಸಿದರು.
 ಈಗಾಗಲೇ ಕ್ಷೇತ್ರದಲ್ಲಿ 1,87,886 ಮತದಾರರನ್ನು ಒಳಗೊಂಡಿದ್ದು, ಹೊಸದಾಗಿ ಮತದಾರರು ಸೇರ್ಪಡೆಯಾಗಲು 10,955 ಅರ್ಜಿ ಸಲ್ಲಿಸಿದ್ದಾರೆ. ಮತದಾರರ ಹೆಸರು ಮತ್ತು ವಿಳಾಸ ತಿದ್ದುಪಡಿಗೆ 1585 ಅರ್ಜಿಗಳು ಮತ್ತು ಮತಗಟ್ಟೆ ಕೇಂದ್ರಗಳ ಬದಲಾವಣೆ ಕುರಿತು 10 ಅರ್ರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು 113 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ವಿವರಣೆ ನೀಡಿದರು.
 ಚುನಾವಣೆಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿಗಳು, ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಮತ್ತು ಪ್ರತಿನಿಧಿಗಳು ಚುನಾವಣಾ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಅನುಪಾಲನೆ ಮಾಡಬೇಕಾಗಿರುತ್ತದೆ. ಆದ ಕಾರಣ ಸಭೆ ಸಮಾರಂಭಗಳು ರ್ಯಾಲಿ ಇತ್ಯಾದಿ ಪ್ರಚಾರ ಕಾರ್ಯ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.  ಬಳಸುವ ಎಲ್ಲಾ ವಾಹನಗಳಿಗೂ ಪರವಾನಗಿ ಪಡೆಯಬೇಕು, ಬ್ಯಾನರ್ ಬಂಟಿಗ್, ಪೋಸ್ಟರ್ ಕಟೌಟ್ ಪ್ರಚಾರ ಸ್ಥಿರ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
 ಕ್ಷೇತ್ರದ ಗಡಿಭಾಗದ ಕಡೂರು ಮಾರ್ಗದ ಚಿಕ್ಕಾರೆಹಳ್ಳಿ ಗೇಟ್ ಹಾಗೂ ತಿಪಟೂರು ಮಾರ್ಗಗಳಲ್ಲಿ ಎರಡು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ಅವಶ್ಯಕ ಕಂಡು ಬಂದಲ್ಲಿ ಸ್ಥಾಪಿಸಲಾಗುವುದು ಎಂದರು.
  ಕ್ಷೇತ್ರದ ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ಉಪಕಾರ್ಯದರ್ಶಿ ಕೆ.ಕರಿಯಪ್ಪ, ಮತ್ತು ತಾಲೂಕು ತಂಡದ ಮುಖ್ಯಸ್ಥರಾಗಿ ತಾ.ಪಂ.ಇ,ಓ ಎಚ್.ಎಸ್. ಚಂದ್ರಶೇಖರ್ ಕರ್ತವ್ಯ ನಿರ್ವಹಿಸುವರು. ಅಭ್ಯರ್ಥಿಗಳ ವೆಚ್ಚದ ಮೇಲ್ವಿಚಾರಣೆಗಾಗಿ ಐ.ಆರ್.ಎಸ್ ಅಧಿಕಾರಿ ವಿಮಲನಾಥ್ ಅವರನ್ನು ಆಯೋಗ ನೇಮಕ ಮಾಡಿದೆ ಎಂದು ವಿವರಿಸಿದರು.
  ಮೇ.5 ರಂದು ನಡೆಯಲಿರುವ ಚುನಾವಣೆಗೆ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಎಲ್ಲರೂ ಮತದಾನದಲ್ಲಿ ಭಾಗವಹಿಸಲು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಚುನಾವಣೆಯಲ್ಲಿ ಅಕ್ರಮ ಕಂಡು ಬಂದಲ್ಲಿ ಸಾರ್ವಜನಿಕರು ದೂರವಾಣಿ ಕರೆಗಳ ಮೂಲಕ ಈ ಅಧಿಕಾರಿಗಳನ್ನ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಮೊಬೈಲ್ 94481 47940  ಮತ್ತು  98440 94497 ಮಾಹಿತಿ ನೀಡಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement