ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೀರಭದ್ರ, ಅಣ್ಣಪ್ಪ ಕೆಂಡೋತ್ಸವ

Vishwanath S
Updated On : 12 Apr 2013, 10:20 am

ಕನ್ನಡಪ್ರಭ ವಾರ್ತೆ , ಹಾಸನ , ಏ.12
ಯುಗಾದಿ ಹಬ್ಬದ ಅಂಗವಾಗಿ ನಗರದ ಸಮೀಪ ಗುಂಡೇಗೌಡನಕೊಪ್ಪಲು ಉದ್ಭವ ಗಣಪತಿ ದೇವಾಲಯದವರೆಗೂ ಶ್ರೀ ಶನೇಶ್ವರ, ರೇಣುಕದೇವಿ, ವೀರಭದ್ರ, ಅಣ್ಣಪ್ಪ ದೇವರುಗಳ ಉತ್ಸವ ನಡೆಯಿತು.
 ಶುಕ್ರವಾರ ಬೆಳಗ್ಗೆ 6 ರಲ್ಲಿ  ಉದ್ಭವ ಗಣಪತಿ ದೇವಸ್ಥಾನದ ಹತ್ತಿರ ಕೆಂಡಕೊಂಡ ನಡೆಯಿತು. ಮೊದಲು ದೇವರನ್ನು ಹೊತ್ತವರು ಕೆಂಡದಲ್ಲಿ ನಡೆದರೆ ನಂತರ ಭಕ್ತಾಧಿಗಳು ಸಾಲು ಸಾಲಾಗಿ ಕೆಂಡದಲ್ಲಿ ನಡೆದರು. 101 ಎಡೆ ಸೇವೆ ಹಾಗೂ ದೂಪದ ಸೇವೆ ಹಮ್ಮಿಕೊಂಡಿದ್ದರು. ನಂತರ ಮಹಾ ಮಂಗಳಾರತಿ ನಡೆಯಿತು. ಗುಂಡೇಗೌಡನಕೊಪ್ಪಲು, ಬಟ್ಲರ್ ಕೊಪ್ಪಲು, ವಿದ್ಯಾನಗರ, ವಿವೇಕನಗರ, ಗೌರಿಕೊಪ್ಪಲಿನ ಭಕ್ತರು ಆಗಮಿಸಿದ್ದರು. ಶನಿದೇವಸ್ಥಾನದ ಅಧ್ಯಕ್ಷ  ಜಿ.ಎನ್. ನಂಜಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement