ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಮೂಲ್ಯ ಮತ ಮಾರಿಕೊಳ್ಳದಿರಿ: ಜಾಗೃತಿ ಕಾರ್ಯಕ್ರಮ

Mainashree
Updated On : 13 Apr 2013, 11:32 am

ಕನ್ನಡಪ್ರಭ ವಾರ್ತೆ೤ ಹಾಸನ೤ ಏ 13
 ಉತ್ತಮ ಸಮಾಜ ನಿರ್ಮಾಣಕ್ಕೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಮೂಲ್ಯವಾದ ನಿಮ್ಮ ಮತವನ್ನು ಮಾರಿಕೊಳ್ಳದಂತೆ ತಿಳಿ ಹೇಳುವ ಕಾರ್ಯಕ್ರಮ ವಂದೇ ಮಾತಂ ಯುವ ಸಂಘದಿಂದ ಶನಿವಾರ ಇಲ್ಲಿ ನಡೆಯಿತು.
 ನಗರದ ಹೇಮಾವತಿ ಪ್ರತಿಮೆ ಬಳಿ ಚನ್ನರಾಯಪಟ್ಟಣ ತಾ. ನುಗ್ಗೇಹಳ್ಳಿಯ ರಂಭಾಪುರಿ ಶಾಖಾ ಪುರವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಉತ್ತಮ ಸಮಾಜ ನಿರ್ಮಿಸಲು ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ.
  ಇತ್ತೀಚೆಗೆ ಜನತೆ ಚುನಾವಣೆಗಳಲ್ಲಿ ಮತ ಚಲಾಯಿಸದಿರಲು ಪ್ರಮುಖವಾಗಿ ಎರಡು ಕಾರಣಗಳಲ್ಲಿ ತಮ್ಮ ಒಂದು ಮತದಿಂದ ಅಂತಹ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ ಎನ್ನುವ ಅಸಡ್ಡೆ ಮತ್ತು ಎಲ್ಲರೂ ಇಂತಹವರೇ ತಾನೆ, ಸ್ಪರ್ಧಿಸುವವರೆಲ್ಲಾ ಅಯೋಗ್ಯರೇ ಆಗಿರುವಾಗ ನಾವು ಮತ ಹಾಕಿದರೂ ಒಂದೇ, ಹಾಕದಿದ್ದರೂ ಒಂದೇ ಎನ್ನುವ ತರ್ಕವನ್ನು ಮತದಾರರು ಬಿಡಬೇಕು ಎಂದು ಸಂಘದ ಕಾರ್ಯಕರ್ತರು ಮನವರಿಕೆ ಮಾಡಿದರು.
 ಮೊದಲನೆ ಸಮಸ್ಯೆ ನಿವಾರಣೆಗೆ ದೀರ್ಘಕಾಲೀನ ಅಭಿಯಾನದ ಅಗತ್ಯವಿದೆ. ಶಿಕ್ಷಿತ ಸಮಾಜದ ಅಸಡ್ಡೆಯನ್ನು, ರಾಜಕೀಯ ವೈರಾಗ್ಯವನ್ನೂ ನಿವಾರಿಸುವುದು ಸುಲಭದ ಮಾತೇನಲ್ಲ. ಆದರೆ ಎರಡನೆಯ ಸಮಸ್ಯೆಯಲ್ಲಿನ ಉಲ್ಟಾ ತರ್ಕವನ್ನು ಸೀದಾ ತರ್ಕದಿಂದ ಉತ್ತರಿಸಿದರೆ, ಹಾಗೆ ಯೋಜಿಸುವವರ ಮನ ಪರಿವರ್ತನೆ ಸಾಧ್ಯ ಎನ್ನುವುದು ಆಶಾವಾದವಾಗಿದೆ.
 ಹೀಗಿದ್ದರೂ ಮತದಾರ ಬಂಧಗಳು ಕೆಲವು ಕೆಟ್ಟ ಚುನಾವಣಾ ಪ್ರತಿನಿಧಿಗಳು ನೀಡುವ ಹಣ, ಹೆಂಡ, ಎಲೆಕ್ಟ್ರಾನಿಕ್ಸಾ ಸಾಮಾಗ್ರಿಗಳು, ಬಟ್ಟೆಗಳು, ಒಡವೆ, ಆಹಾರ ಪದಾರ್ಥಗಳು ಹಾಗೂ ಬಾಡೂಟದ ಆಮಿಷಗಳಿಗೆ ಬಲಿಯಾಗದೆ, ಜಾತಿ ವ್ಯಾಮೋಹಕ್ಕೆ ಒಳಗಾಗದೆ ಮತ ಚಲಾಯಿಸಬೇಕು ಎಂದರು.
   ಚುನಾವಣೆಯಲ್ಲಿ ಯಾವುದೇ ಹಣ, ಹೆಂಡ, ದಿನಬಳಕೆ ವಸ್ತುಗಳಿಗೆ ಮತ ಮಾರಿಕೊಳ್ಳಬೇಡಿ ಎಂದು ಜಾಗೃತಿ ಮೂಡಿಸಿದರು.  ವಂದೇ ಮಾತರಂ ಯುವ ಸಂಘದ ಅಧ್ಯಕ್ಷ ಡಿ.ಎನ್.ಕೃಪಾ, ವಿಕ್ರಂ ಜೈ ಹಿಂದ್, ವಿಠಲ್‌ದಾಸ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement