ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಜೆಪಿಗೆ ಮತ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದಂತೆ

Mainashree
Updated On : 13 Apr 2013, 11:31 am

ಕನ್ನಡಪ್ರಭ ವಾರ್ತೆ೤ ಸಕಲೇಶಪುರ೤ ಏ.13
ಕರ್ನಾಟಕ ಜನತಾಪಕ್ಷಕ್ಕೆ ಮತ ನೀಡಿದರೆ, ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದಂತೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
 ಪಟ್ಟಣದ ಓಂ ಮಂದಿರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಎಸ್ಸಿಎಸ್ಟಿ ಘಟಕ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪದಡಿ ಜೈಲಿಗೆ ಹೋಗಿ ಬಂದ ವ್ಯಕ್ತಿ ಸ್ಥಾಪಿಸಿರುವ ಪಕ್ಷಕ್ಕೆ ಮತ ನೀಡುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತೆ ಆಗುವುದು ಎಂದು ಹೇಳಿದರು.
  ದಲಿತರ ವಿರೋಧಿ ಎಂಬ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳು ನಾನು ದಲಿತ ವಿರೋಧಿ ಎಂಬುದನ್ನು ನಿರೂಪಿಸಲಿ, ಇಲ್ಲ ಸಲ್ಲದ ಆರೋಪ ಒಳ್ಳೆಯದಲ್ಲ. ಕ್ಷೇತ್ರದಲ್ಲಿ ದಲಿತರು ಹಾಗೂ ಮೇಲ್ವರ್ಗದವರ ಸಮನ್ವಯದ ಬದುಕು ನಡೆಸುತ್ತಿರುವುದು ಸಹಿಸದೆ ಇಂತಹ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ನುಡಿದರು.
 ಈ ಬಾರಿ ನನ್ನನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ಕೆಲವು ನಾಯಕರು ಕ್ಷೇತ್ರದಲ್ಲಿ ಅಪಾರ ಹಣದ ಹೊಳೆ ಹರಿಸಲು ಸಿದ್ಧತೆ ನಡೆಸಿದ್ದಾರೆ. ಕಾರ್ಯಕರ್ತರು ಅವರು ನೀಡುವ ಹಣದ ಆಮಿಷಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದರು.
  ಕ್ಷೇತ್ರದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ 350 ಕೋಟಿ ರು. ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರ ನೀಡುತ್ತೇನೆ. ಹಿಂದಿನ ಶಾಸಕರು ಅವರ ಅವಧಿಯಲ್ಲಿ ನಡೆಸಿರುವ ವಿವರ ನೀಡಲಿ. ಇದಕ್ಕಾಗಿ ಬಹಿರಂಗ ವೇದಿಕೆ ಸಿದ್ದಪಡಿಸಲಾಗುವುದು ಸವಾಲು ಹಾಕಿದರು.
  ಹಿಂದಿನ ಶಾಸಕರ ಅವಧಿಯಲ್ಲಿ ತಮ್ಮ ನೆಂಟರ ಮನೆ ಮನೆಗಳಿಗೆ ರಸ್ತೆ ಮಾಡಿಸಿ ಕೊಂಡಿದ್ದಾರೆ. ಆದರೆ ನಾನು ಸ್ವಂತಕ್ಕೆಂದು ಇದುವರೆಗೆ ಯಾವುದೇ ಕೆಲಸ ಮಾಡಿಸಿಕೊಂಡಿಲ್ಲ.
  ಕ್ಷೇತ್ರದಲ್ಲಿ ಇದುವರೆಗೆ ಶಾಸಕರಾಗಿದ್ದವರು ಕ್ಷೇತ್ರ ಅಭಿವೃದ್ಧಿ ಪಡಿಸಿದ್ದರೆ ಕ್ಷೇತ್ರ ಹಿಂದುಳಿದಿದೆ ಎಂಬ ಆರೋಪವೇ ಬರುತ್ತಿರಲಿಲ್ಲ. ತೀರಾ ಹಿಂದುಳಿದಿದ್ದ ಕ್ಷೇತ್ರವನ್ನು  5 ವರ್ಷಗಳ ಅವಧಿಯಲ್ಲಿ ಶಕ್ತಿ ಮೀರಿ ಅಭಿವೃದ್ಧಿ ಪಡಿಸಿದ್ದೇನೆ ಎಂದು ತಿಳಿಸಿದರು.
  ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಶೇ 25 ರಷ್ಟಿರುವ ದಲಿತರು ಶಾಸಕರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವಹಿಸ ಬಹುದಾಗಿದೆ. ಆದರೆ ದಲಿತರನ್ನು ಒಡೆದು ಆಳಲಾಗುತ್ತಿದೆ ಎಂದರು. ಚಂಚಲಾ ಕುಮಾರಸ್ವಾಮಿ, ಈರಯ್ಯ, ರಾಮಚಂದ್ರ, ಪ್ರಕಾಶ್, ಪುಟ್ಟಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement