ಪಾರ್ಕಿನ್ಸನ್ ಕುರಿತು ಜನಜಾಗೃತಿ ಕಾರ್ಯಕ್ರಮ
ಹಾಸನ: ಪ್ರತಿಯೊಬ್ಬ ಮನುಷ್ಯ ಒಂದಲ್ಲಾ ಒಂದು ನೋವು ಅನುಭವಿಸುತ್ತಿರುತ್ತಾನೆ. ಆದ್ದರಿಂದ ತಮ್ಮಲ್ಲಿ ಇಲ್ಲದಿರುವ ಬಗ್ಗೆ ವ್ಯಥೆ ಪಡದೆ ಇರುವ ಬಗ್ಗೆ ಹೆಮ್ಮೆ ಪಟ್ಟುಕೊಂಡು ಸುಖ ಜೀವನ ನಡೆಸಬೇಕು ಎಂದು ಆಯುರ್ವೇದ ಕಾಲೇಜಿನ ಡಾ. ಗುರುಬಸವರಾಜ್ ತಿಳಿಸಿದರು.
ನಗರದ ಬಾಸೆಲ್ ಗ್ಯಾಂಗ್ಲಿಯಾ ಸಂಪೋರ್ಟ್ ಗ್ರೂಪ್ವತಿಯಿಂದ ಏರ್ಪಡಿಸಿದ್ದ ಪಾರ್ಕಿನ್ಸನ್ ಕಾಯಿಲೆ ಕುರಿತು ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಇರುವ ಗುರಿ ಸಾಧಿಸಲು ಆತ್ಮಸ್ಥೈರ್ಯ ಮುಖ್ಯ, ಅಂಜಿಕೆ ಪಡದೆ ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ರೋಗಿಗಳು ಎದೆಗುಂದದೆ ವೈದ್ಯರಲ್ಲಿ ಸಕಾಲಕ್ಕೆ ತಪಾಸಣೆ ಮಾಡಿಸಿ ಕೊಂಡು ಅಗತ್ಯ ಔಷದೋಪಚಾರ ತೆಗೆದು ಕೊಳ್ಳುವಂತೆ ಸಲಹೆ ನೀಡಿದರು. ಸಾಹಿದ್ಸಾಬ್ ಸ್ವಾಗತಿಸಿದರು. ಡಾ ಶರತ್ಚಂದ್ರ ನಿರೂಪಿಸಿದರು. ಸತ್ಯಸುಬ್ರಹ್ಮಣ್ಯ ವಂದಿಸಿದರು. ಶರ್ವರಿ ಪ್ರಾರ್ಥಿಸಿದರು.