ಅಂಬೇಡ್ಕರ್ ದೇಶ ಕಂಡ ಅಪರೂಪದ ವ್ಯಕ್ತಿ
ಹೊಳೆನರಸೀಪುರ: ಬಾಬಾ ಸಾಹೇಬ್ ಅಂಬೇಡ್ಕರ್ ದೇಶದ ಎಲ್ಲ ವರ್ಗಗಳ ನೇತಾರರು. ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಡಿವೈಎಸ್‌ಪಿ ಪ್ರದೀಪ್‌ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತ ಆಯೋಜಿಸಿದ್ದ ಅಂಬೇಡ್ಕರ್ 122 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದೇಶ ಕಂಡ ಅಪರೂಪದ ಮಹಾನ್‌ವ್ಯಕ್ತಿ ಎಂದು ಬಣ್ಣಿಸಿದರು. ತಹಸೀಲ್ದಾರ್ ಮಂಜುಳ, ಅಧ್ಯಕ್ಷತೆ ವಹಿಸಿದ್ದರು.
ಅಸಿಸ್ಟೆಂಟ್ ಕಮಿಷನರ್ ಜಗದೀಶ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಿಇಒ ಯೋಗೇಶ್, ಸಿಪಿಐ ಗೋಪಾಲನಾಯಕ್, ತಾಪಂ ಅಧಿಕಾರಿ ತಮ್ಮಣ್ಣಗೌಡ ಅಂಬೇಡ್ಕರ್ ಕುರಿತು ಮಾತನಾಡಿದರು. ಕೃಷಿ ಇಲಾಖೆ ಅಧಿಕಾರಿ ಯು.ಎಚ್.ಭಾನುಪ್ರಕಾಶ್, ಅಕ್ಷರದಾಸೋಹ ಅಧಿಕಾರಿ ಕುಮಾರ್, ಕಂದಾಯ ಇಲಾಖೆಯ ಪ್ರಸನ್ನಮೂರ್ತಿ, ನಾನಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಸಮಾಜಕಲ್ಯಾಣ ಇಲಾಖೆ ಅಧಿಕಾರಿ ರಂಗರಾಜು ಸ್ವಾಗತಿಸಿದರು.