ಅರಸಿನ ಬಾವಿ ಶುಚಿಗೊಳಿಸಿದ ಸಾರ್ವಜನಿಕರು
ಬಾಣಾವರ: ಗ್ರಾಮದ ಕಲ್ಯಾಣಿ ಎಂದೇ ಕರೆಯುವ ಅರಸಿನ ಬಾವಿಯನ್ನು ಸಾರ್ವಜನಿಕರೆಲ್ಲ ಸೇರಿ ಶುಚಿಗೊಳಿಸಿದರು. ಕಳೆದ ವರ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಸ್ವತ: ಬಾವಿಯನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾದರು. ಬಾಣಾವರದ ಕಲ್ಯಾಣಿ ಎಂದೇ ಕರೆಸಿಕೊಳ್ಳುವ ಈ ಬಾವಿ ಸುತ್ತಲ ಗ್ರಾಮಗಳಿಗೆ ವರದಾನವಾಗಿತ್ತು. ಅಲ್ಲದೆ ಗಂಗಮ್ಮನ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಇಲ್ಲಿಂದ ಭಕ್ತಿ ಪೂರ್ವಕವಾಗಿ ನೀರನ್ನು ಹೊತ್ತೊಯ್ಯ ಲಾಗುತ್ತಿತ್ತು.
ಬಾವಿ ಹೂಳು ತುಂಬಿಕೊಂಡಿದ್ದರೂ ಸಂಬಂಧಪಟ್ಟರು ಗಮನ ಹರಿಸದಿದ್ದಕ್ಕೆ ಬೇಸತ್ತ ಗ್ರಾಮಸ್ಥರು ಸ್ವತ: ಬಾವಿಯ ಹೂಳು ತೆಗೆದರು. ತಾಪಂ ಸದಸ್ಯ ಬಿ. ರವಿಶಂಕರ್, ಗ್ರಾಪಂ ಸದಸ್ಯ ಬಿ.ಡಿ. ಮಲ್ಲಿಕ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಕಾಂಗ್ರೆಸ್ ಉಪಾಧ್ಯಕ್ಷ ಸಮಿವುಲ್ಲಾ ಷರೀಫ್, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ಹಾಗೂ ಗ್ರಾಮದ ಯೋಗೇಶ್ ಕುಂಬಾರ ಭಾಗವಹಿಸಿದ್ದರು.