ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಮುಖ ಪಕ್ಷಗಳ ಕಚೇರಿಯಲ್ಲಿ ಜನ್ಮದಿನಾಚರಣೆ

Mainashree
Updated On : 14 Apr 2013, 9:16 am

ಕನ್ನಡಪ್ರಭ ವಾರ್ತೆ ಅರಸೀಕೆರೆ ಏ 14
ಸಂವಿಧಾನಶಿಲ್ಪಿ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ 122ನೇ ಜಯಂತಿಯನ್ನು ಪಟ್ಟಣದ ಕಾಂಗ್ರೆಸ್, ಕೆಜೆಪಿ, ಜೆಡಿಎಸ್ ಸೇರಿದಂತೆ ನಾನಾ ಪಕ್ಷಗಳ ರಾಜಕೀಯ ಮುಖಂಡರು ತಮ್ಮ ತಮ್ಮ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಿದರು.
ಹಾಸನ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುರಸಭಾ ಮಾಜಿ ಸದಸ್ಯ ಲೋಕೇಶ್ ಹಾಗೂ ಮತ್ತವರ ಬೆಂಬಲಿಗರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ಜೆಡಿಎಸ್ ಕಚೇರಿ: ಸ್ವಾತಂತ್ರ್ಯಾ ನಂತರ ಈ ರಾಷ್ಟ್ರ ಸಮರ್ಥ ಸಂವಿಧಾನವನ್ನು ರಚಿಸಿಕೊಳ್ಳಬಹುದೇ ಎಂಬ ಬೇರೆ ರಾಷ್ಟ್ರಗಳ ಪ್ರಶ್ನೆಗೆ ತಕ್ಕ ಉತ್ತರ ನೀಡಿ ವಿಶ್ವವೇ ಮೆಚ್ಚುವಂತಹ ಸಂವಿಧಾನ ರಚಿಸಿದ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಮಾರುತಿ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಹಲವು ಭಾಷೆಯ, ಹಲವು ಜಾತಿಯ, ಹಲವು ಧರ್ಮಗಳ ಜನರು ವಾಸಿಸುತ್ತಿರುವ ಭಾರತದಲ್ಲಿ ಎಲ್ಲರಿಗೊಪ್ಪುವಂತಹ ಸಂವಿಧಾನ ರಚಿಸಿದವರು ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಎಂದರು. ತಾಪಂ ಮಾಜಿ ಉಪಾಧ್ಯಕ್ಷ ಎಚ್.ಟಿ.ಶಿವಮೂರ್ತಿ ಮಾತನಾಡಿ, ಅಂಬೇಡ್ಕರ್ ಒಂದು ಜನಾಂಗಕ್ಕೆ ಸೀಮಿತವಾದವರಲ್ಲ ಎಂದು ತಿಳಿಸಿದರು. ಪುರಸಭಾ ಸದಸ್ಯೆ ಅನ್ನಪೂರ್ಣ, ಮಾಜಿ ಅಧ್ಯಕ್ಷ ಸಮೀವುಲ್ಲಾ, ಜೆಡಿಎಸ್ ಮುಖಂಡ ನಾಗರಹಳ್ಳಿ ಚಂದ್ರಶೇಖರ್, ನೂರಾರು ಜೆಡಿಎಸ್ ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕೆಜೆಪಿ ಅಭ್ಯರ್ಥಿ ಮನೆಯಲ್ಲಿ: ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಡಾ.ಲೋಕೇಶ್ ನಿವಾಸದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಂಬೇಡ್ಕರ್ ಜನ್ಮದಿನ ಆಚರಿಸಿ ಸಿಹಿ ವಿತರಿಸಿದರು. ದಲಿತ ಮುಖಂಡ ಮೈಲನಹಳ್ಳಿ ರಂಗಸ್ವಾಮಿ ಮಾತನಾಡಿ ಮಾಜಿ ಶಾಸಕ ದಿ. ಡಿ.ಬಿ.ಗಂಗಾಧರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಮೀಸಲಾತಿ ಇಲ್ಲದಿದ್ದರೂ ಎಲ್ಲಾ ಜಾತಿ ಜನಾಂಗಗಳಿಗೆ ಅಧಿಕಾರ ದೊರಕಿಸಿ ಕೊಡುವ ಮೂಲಕ ಸಮಾನತೆಯನ್ನು ಸಾರಿ ಅಂಬೇಡ್ಕರ್ ತತ್ವ, ಸಿದ್ದಾಂತ ಚಾಚುತಪ್ಪದೆ ಪಾಲಿಸಿಕೊಂಡು ಬಂದ ಧೀಮಂತ ಹೋರಾಟಗಾರರಾಗಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಪುತ್ರ ಅಂಬೇಡ್ಕರ್ ತತ್ವ, ಆದರ್ಶ, ಚಿಂತನೆ ಮೈಗೂಡಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ. ಅವರ ಮನೆಯಲ್ಲಿ ಕಾರ್ಯಕ್ರಮ ಆಚರಿಸುತ್ತಿರುವುದು ಎಲ್ಲರೂ ಹೆಮ್ಮೆ ಪಡಬೇಕಾದ ವಿಷಯ ಎಂದರು.
ದಲಿತ ಹಾಗೂ ಹಿಂದುಳಿದ ವರ್ಗಗಳ ಹಲವು ಮುಖಂಡರು ಲೋಕೇಶ್ ಸಮ್ಮುಖದಲ್ಲಿ ಕಾಂಗ್ರೆಸ್, ಜೆಡಿಎಸ್
ತೊರೆದು ಕೆಜೆಪಿ ಸೇರಿದರು. ತಾಪಂ ಮಾಜಿ ಸದಸ್ಯ ಶಂಕರನಹಳ್ಳಿ ರಾಮನಾಯ್ಕ, ಯಾದಾಪುರ ಶಿವಣ್ಣ, ಸೋಮನಹಳ್ಳಿ ಪಾಳ್ಯದ ಜಗದೀಶ್, ಹೊನ್ನಕಟ್ಟ ಪುಟ್ಟಯ್ಯ, ಅಜ್ಜನಹಳ್ಳಿ ರಾಮಣ್ಣ, ಪುರಸಭಾ ಸದಸ್ಯ ಶೈಲೇಂದ್ರಕುಮಾರ್, ಅರುಣಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement