ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಶಾಸಕ ಎಚ್.ಕೆ.ಕುಮಾರಸ್ವಾಮಿ ಸಾಧನೆ ಪಟ್ಟಿ ಬಿಡುಗಡೆ ಮಾಡಲಿ'

Mainashree
Updated On : 14 Apr 2013, 10:58 am

ಕ.ಪ್ರ.ವಾರ್ತೆ  ಸಕಲೇಶಪುರ  ಏ. 14
ಶಾಸಕ ಎಚ್.ಕೆ ಕುಮಾರಸ್ವಾಮಿ ಕಳೆದ ಐದು ವರ್ಷದ ಸಾಧನೆ ಪಟ್ಟಿಯನ್ನು ಬಿಡುಗಡೆ ಮಾಡಿ ನಂತರ ಇನ್ನೊಬ್ಬರನ್ನು ಟೀಕಿಸಲಿ ಎಂದು ಕೆಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಬಿ.ಆರ್.ಗುರುದೇವ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಹಿಂದಿನ ಶಾಸಕರ ಸಾಧನೆಯನ್ನು ಅವಹೇಳನ ಮಾಡಿರುವ ಶಾಸಕ ಎಚ್.ಕೆ ಕುಮಾರಸ್ವಾಮಿಗೆ ಕ್ಷೇತ್ರದ ಇತಿಹಾಸದ ಅರಿವಿಲ್ಲ. ಎರಡು ಅವಧಿಗೆ ಶಾಸಕರಾಗಿದ್ದ ಬಿ.ಬಿ. ಶಿವಪ್ಪ ಹಾಗೂ ಒಂದು ಬಾರಿ ಶಾಸಕರಾಗಿದ್ದ ನಾನು ನಮ್ಮ ಅವಧಿಯಲ್ಲಿ ನಡೆಸಿರುವ ಸಾಧನೆಯ ಕಿರುಹೊತ್ತಿಗೆ ಪ್ರಕಟಿಸಿ ಕ್ಷೇತ್ರದಲ್ಲಿ ಹಂಚಿದ್ದೇವೆ. ಆದ್ದರಿಂದ ನಮ್ಮನ್ನು ಟೀಕಿಸುವ ಮುನ್ನ ಇತಿಹಾಸ ಅರಿಯುವುದು ಒಳ್ಳೆಯದು ಎಂದರು.
 ಬಾಳ್ಳುಪೇಟೆ-ಕೆರೋಡಿ ರಸ್ತೆ ಅಭಿವೃದ್ಧಿ ಪಡಿಸಿದ್ದು ಸಚಿವ ಸೋಮಣ್ಣನವರ ಸಹಕಾರದಿಂದ ನಾನು ಹಾಗೂ ಬಿ.ಬಿ. ಶಿವಪ್ಪನವರೇ ಹೊರತು ಶಾಸಕ ಕುಮಾರಸ್ವಾಮಿ ಅಲ್ಲ ಎಂದರು.
ಶಾಸಕ ಕುಮಾರಸ್ವಾಮಿಯವರ ಸೋಮಾರಿತನ, ದಲಿತ ವಿರೋಧಿ ನೀತಿ, ಬೇಜವಾಬ್ದಾರಿತನಕ್ಕೆ ಈ ಬಾರಿ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮಾನನಷ್ಟ ಬೆದರಿಕೆ:  ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸುವ ವೇಳೆ ಕೆಜೆಪಿ ಅಭ್ಯರ್ಥಿ ಕೊಲೆಗಾರ ಎಂದು ಸುಳ್ಳು ಹೇಳುತ್ತಿರುವ ಜೆಡಿಎಸ್ ಮುಖಂಡ ಬೆಕ್ಕನಹಳ್ಳಿ ನಾಗರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಗುರುದೇವ್ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement