ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 14 Apr 2013, 9:17 am

ಇಂದಿನಿಂದ ಚೆಸ್ ಆಟ ತರಬೇತಿ
ಹಾಸನ: ನಗರದ ಜಿಲ್ಲಾ ಚೆಸ್ ತರಬೇತಿ ಕೇಂದ್ರದಿಂದ ಏ 15 ರಿಂದ 14-16 ಮತ್ತು 19 ವರ್ಷ ವಯೋವುತಿ ಒಳಗಿನ ಚೆಸ್ ಆಟಗಾರರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗೆ ಮೊ 944899 7228 ಸಂಪರ್ಕಿಸಲು ಕೋರಲಾಗಿದೆ.
ನುಗ್ಗೇಳಮ್ಮ ರಥೋತ್ಸವ
ನುಗ್ಗೇಹಳ್ಳಿ: ಪಟ್ಟಣದ ಗ್ರಾಮದೇವತೆ ನುಗ್ಗೇಳಮ್ಮ ಜಾತ್ರಾಮಹೋತ್ಸವ  ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ನುಗ್ಗೇಹಳ್ಳಿ, ಮುದ್ದನಹಳ್ಳಿ, ಬಸವನಪುರ, ವಿರೂಪಾಕ್ಷಿಪುರ, ಹೂಮೊನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು. ಗುಡಿಗೌಡರಾದ  ಚಿಕ್ಕೇಗೌಡ, ಗ್ರಾಮ ಪಂಚಾಯಿತಿ  ಸದಸ್ಯ ಮಂಜುನಾಥ್ ಇನ್ನಿತರರು ಪಾಲ್ಗೊಂಡಿದ್ದರು.
ಕೋಡಮ್ಮದೇವಿ ಮಹಾರಥೋತ್ಸವ
ಹಾರನಹಳ್ಳಿ: ಗ್ರಾಮದೇವತೆ ಶ್ರೀ ಕೋಡಮ್ಮ ದೇವಿ ಮಹಾ ರಥೋತ್ಸವ ಏ.19 ರವರೆಗೆ ನಡೆಯಲಿದೆ.
ಏ.15 ರಂದು ಮದುವಣಗಿತ್ತಿ ಶಾಸ್ತ್ರ, 16 ರಂದು ಕರ್ಪೂರ ಸೇವೆ, ಪಂಚಾಮೃತ ಅಭಿಷೇಕ, 17 ಪೋಡು ಗಲ್ಲು ಸೇವೆ, 18 ಯಳವಾರೆ ಹುಚ್ಚಮ್ಮ ದೇವಿ ಹಾಗೂ ಕೋಡಮ್ಮ ದೇವಿಯ ಉಯ್ಯಾಲೋತ್ಸವ, ಸಿಡಿ ಸೇವೆ, ಧೂತರಾಯ ಸೇವೆ ನಂತರ ಮಹಾ ರಥೋತ್ಸವ ನಡೆಯಲಿದೆ.19 ರಂದು ಬೇವಿನ ಮರದಮ್ಮ ರಥೋತ್ಸವ ನಡೆಯುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement