ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂತರಂಗ ಶುದ್ಧಿ ಮುಖ್ಯ : ಸೋಮಶೇಖರ ಸ್ವಾಮೀಜಿ

Vishwanath S
Updated On : 15 Apr 2013, 10:30 am

ಕ.ಪ್ರ. ವಾರ್ತೆ,ಬೇಲೂರು,ಏ.15
 ಮಾನವ ಕೇವಲ ಬಹಿರಂಗ ಶುದ್ಧಿಗೆ ಗಮನ ನೀಡಿದೆ, ನಮ್ಮ ಅಂತರಂಗದ ಶುದ್ಧಿ ಮಾಡಿಕೊಳ್ಳುವ ಮೂಲಕ ಮಾನವತ್ವದಿಂದ ದೈವತ್ವಕ್ಕೆ ಹೋಗಬೇಕು ಎಂದು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
 ತಾಲೂಕಿನ ಹೆಬ್ಬಾಳು ಗ್ರಾಮದ ಚನ್ನಬಸವೇಶ್ವಸ್ವಾಮಿ ಹಾಗೂ ಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಕೆಂಡೋತ್ಸವ ನಂತರ ಏರ್ಪಟ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮಾನವ ನಡೆ-ನುಡಿಯಲ್ಲಿ ದಾರಿ ತಪ್ಪಿದ್ದು, ತಾನು ನುಡಿಯಲ್ಲಿ ಮಾತ್ರ ಶುದ್ಧತೆಯನ್ನು ಸಾಧನೆ ಮಾಡಿ ಅಚರಣೆಯಲ್ಲಿ ಹಿಂದೆ  ಬಿದ್ದಿದ್ದಾರೆ ಎಂದರು.
 ಭಾರತೀಯ ಸಂಸ್ಕೃತಿಯಲ್ಲಿ ವೀರಶೈವ ಧರ್ಮದ ಅಚರಣೆಗಳು ಆದರ್ಶ ಪ್ರಾಯವಾಗಿದ್ದು, ವೀರಶೈವ ಧರ್ಮದಲ್ಲಿ ವಟುಗಳಿಗೆ ನೀಡುವ ಸಂಸ್ಕಾರ ಮುಂದಿನ ತನ್ನ ಬದುಕಿನಲ್ಲಿ ಉತ್ತಮವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
 ವೀರಶೈವನಾಗಿ ಹುಟ್ಟಿದ ಮಾತ್ರಕ್ಕೆ ಆತನು ಯಾವುದೇ ಕಾರಣಕ್ಕೂ ಲಿಂಗಾಯಿತನಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಗುರು ಕಾರುಣ್ಯದಿಂದ ಲಿಂಗ ದೀಕ್ಷೆ ಅಥವಾ ಸಂಸ್ಕಾರ ಪಡೆಯುವ ಮೂಲಕ ನಿಜ ವೀರಶೈವನಾಗುತ್ತಾನೆ ಎಂದರು.
 ಗುರುಗಳು ಲಿಂಗ ದೀಕ್ಷೆ ನೀಡುವ ಸಂದರ್ಭದಲ್ಲಿ ಸಮಾಜಕ್ಕೆ ಉತ್ತಮ ನಡತೆಯಿಂದ ಬಾಳುವ ದೃಢ ನಿರ್ಧಾರವನ್ನು ಬೋಧನೆ ಮಾಡಬೇಕು. ಈ ಕಾರ್ಯ ಗುರುಗಳ ಕರ್ತವ್ಯವಾಗಿದೆ. ಇಂದಿನ ದಿನದಲ್ಲಿ ಯುವಕರು ಕೆಟ್ಟ ಚಟಗಳಿಗೆ ಅಕರ್ಷಕರಾಗುತ್ತಾ ತಮ್ಮ ವಯಸ್ಸು ಪೂರೈಸುವ ಪ್ರಥಮದಲ್ಲೇ ಮರಣ ಹೊಂದುತ್ತಿದ್ದಾರೆ ಎಂದು ವಿಷಾದಿಸಿದರು.
 ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವಿಘ್ನೇಶಯ್ಯ, ಗುತ್ತಿಗೆದಾರ ಎಚ್.ಜಿ.ಭುವನೇಶ್, ಶಿಕ್ಷಕ ಧನಂಜಯ, ಗ್ರಾಮದ ಚಂದ್ರಶೇಖರಯ್ಯ, ನೇ. ಚಂದ್ರಣ್ಣ, ಪ. ರಾಮೇಗೌಡ, ಸೀ. ಮಲ್ಲೇಶ್, ಎಚ್.ಬಿ.ಶಿವಕುಮಾರ್,   ಎಚ್.ಎಸ್. ಮೋಹನ್, ವೀರೇಗೌಡ, ಆಗ್ರೋ ಕೇಂದ್ರದ ಸೋಮಶೇಖರ್, ಸುಧಾಕರ್, ಅಂಗಡಿ ಬಸವಣ್ಣ, ಶರತ್, ಪುನೀತ್, ನಿಕಿಲ್, ಜಗದೀಶ್, ರಾಜಶೇಖರ್, ದಾನೇಗೌಡ ಇತರರು ಇದ್ದರು.
 ಇದೇ ಸಂದರ್ಭದಲ್ಲಿ ಸುಮಾರು 30 ಯುವಕರಿಗೆ ಲಿಂಗದೀಕ್ಷೆಯನ್ನು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೀಡಿದರು. ಆಗಮಿಕರಾಗಿ ಜಗದೀಶ್‌ಮೂರ್ತಿ, ಸಿದ್ದಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement