ಕಾರ್ಯಕರ್ತಕರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ನಿಂದ ಸ್ಪರ್ಧೆ: ರುದ್ರೇಶಗೌಡ
ಬೇಲೂರು: ಶಾಸಕನಾಗಿ ಕಳೆದ ಐದು ವರ್ಷ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದು, ಪಕ್ಷದ ಮತ್ತು ಮತದಾರರ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಕ್ಷೇತ್ರದಲ್ಲಿ ಮತ್ತೊಮ್ಮೆ ಸೇವೆ ಮಾಡಲು ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವುದಾಗಿ ಶಾಸಕ ವೈ.ಎನ್.ರುದ್ರೇಶ್ಗೌಡ ತಿಳಿಸಿದರು.
ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಾರ ಬೆಂಬಲಿಗರು
ನನ್ನನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಮಾಡಲು ತುಂಬು ಉತ್ಸುಕತೆಯಿಂದ ಇರುವುದನ್ನು ನೋಡಿದರೆ ಸಂತೋಷವಾಗುತ್ತದೆ.
ಇಷ್ಟೊಂದು ಬೆಂಬಲಿಗರು ನನ್ನನ್ನು ಹುರಿದುಂಬಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಮತ್ತೊಮ್ಮೆ ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ವೈ.ಟಿ.ದಾಮೋದರ್, ವೈ.ಎನ್.ಕೃಷ್ಣೇಗೌಡ, ಪುನೀತ್ಗೌಡ, ಬಿರಟೆಮನೆ ಸುರೇಶ್, ಕಲ್ಲಹಳ್ಳಿ ನಾಗರಾಜು, ಪುರಸಭೆ ಸದಸ್ಯ ಧರ್ಮೆಗೌಡ, ಸಲೀಂ ಇದ್ದರು.