ಜಿಲ್ಲೆಯಲ್ಲಿ ಒಟ್ಟು 50 ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಹಾಸನ, ಏ. 15
ಜಿಲ್ಲೆಯ 7 ಕ್ಷೇತ್ರಗಳಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಕಾರ್ಯ ಚುರುಕುಗೊಂಡಿದ್ದು, ಒಂದೇ ದಿನ 50 ನಾಮಪತ್ರಗಳು ಸಲ್ಲಿಕೆಯಾಗಿವೆ.ಅರಸೀಕೆರೆಯಲ್ಲಿ 4, ಅರಕಲಗೂಡಿನಲ್ಲಿ 11, ಬೇಲೂರಿನಲ್ಲಿ 4, ಹಾಸನದಲ್ಲಿ 3, ಸಕಲೇಶಪುರದಲ್ಲಿ 13, ಶ್ರವಣಬೆಳಗೊಳದಲ್ಲಿ 10 ಮತ್ತು ಹೊಳೆನರಸೀಪುರದಲ್ಲಿ 5 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾನಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಸ್ಮರ್ಧಾ ಕಣಕ್ಕೆ ಇಳಿದಿದ್ದಾರೆ. ಅರಸೀಕೆರೆಯಿಂದ ಕಾಂಗ್ರೆಸ್ನಿಂದ ಬಿ.ಶಿವರಾಂ, ಬಿಜೆಪಿಯಿಂದ ಡಿ.ಬಿ. ಗಂಗಾಧರ್, ಜೆಡಿಎಸ್ನಿಂದ ಕೆ.ಎಂ.ಶಿವಲಿಂಗೇಗೌಡ ಮತ್ತು ದೇವರಾಜೇಗೌಡ ಪಕ್ಷೇತರವಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಶಿವರಾಜು ತಿಳಿಸಿದ್ದಾರೆ. ಅರಕಲಗೂಡು ಕ್ಷೇತ್ರದಲ್ಲಿ 5 ಮಂದಿ ಒಟ್ಟು 11 ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ನಿಂದ ಹಾಲಿ ಶಾಸಕ ಎ.ಮಂಜು, ಕೆಜೆಪಿಯಿಂದ ಎಸ್. ಪುಟ್ಟಸ್ವಾಮಿ ಹಾಗೂ ಬಿಜೆಪಿಯಿಂದ ಎಂ.ಕೆ.ನಟರಾಜ್ ತಲಾ 2 ನಾಮಪತ್ರ ಸಲ್ಲಿಸಿದರೆ ಜೆಡಿಎಸ್ನಿಂದ ಎ.ಟಿ.ರಾಮಸ್ವಾಮಿ 4 ನಾಮಪತ್ರಗಳು, ಪಕ್ಷೇತರ ಅಭ್ಯರ್ಥಿಯಾಗಿ ಕವಿತ ಕೆ.ಎನ್. ಕೋಂ ಯೋಗಾ ರಮೇಶ್ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.
ಹೊಳೆನರಸೀಪುರದಿಂದ ಜೆಡಿಎಸ್ನಿಂದ ರೇವಣ್ಣ, ಕಾಂಗ್ರೆಸ್ನಿಂದ ಎಸ್.ಜಿ. ಅನುಪಮ, ಬಿಜೆಪಿಯಿಂದ ಹೇಮಂತ್ಕುಮಾರ್, ಕುಮಾರ್, ಎಂ.ಎನ್. ರಾಜು ಮತ್ತು ಪಕ್ಷೇತರರಾಗಿ ಎಂ. ಮಹೇಶ್ ಸ್ಪರ್ಧಿಸಿದ್ದಾರೆ.
ಬೇಲೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲಕ್ಷ್ಮಣ್, ಕಾಂಗ್ರೆಸ್ನಿಂದ ವೈ.ಎನ್.ರುದ್ರೇಶ್ಗೌಡ, ಸಂಯುಕ್ತ ಜನತಾ ದಳದಿಂದ ಚನ್ನೇಗೌಡ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಿ. ಶಿವರುದ್ರಪ್ಪ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಇಲಿಯಾಸ್ ಉಲ್ಲಾ ಷರೀಫ್ ತಿಳಿಸಿದ್ದಾರೆ. ಹಾಸನ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಕೆ. ಮಹೇಶ್ 2 ನಾಮಪತ್ರ ಮತ್ತು ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಎಚ್.ಎ. ನಂಜೇಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಚಿದಾನಂದ ತಿಳಿಸಿದ್ದಾರೆ.
ಆಲೂರು-ಸಕಲೇಶಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ. ನಾರಾಯಣಸ್ವಾಮಿ 1, ಕೆಜಿಪಿಯಿಂದ ಉಮೇಶ್ ಬೆಳಗೋಡು 2, ಜೆಡಿಎಸ್ದಿಂದ ಎಚ್.ಕೆ.ಕುಮಾರಸ್ವಾಮಿ 2, ಕಾಂಗ್ರೆಸ್ ನಿಂದ ಡಿ. ಮಲ್ಲೇಶ್ 4, ಪಕ್ಷೇತರ ಅಭ್ಯರ್ಥಿಯಾಗಿ ತಿಮ್ಮಯ್ಯ-2, ಜೆಡಿಯು ಪಕ್ಷದಿಂದ ವೆಂಕಟೇಶ್-2 ಸೇರಿದಂತೆ ಒಟ್ಟು 13 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.
ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ.ಪಕ್ಷದ ಅಭ್ಯರ್ಥಿಯಾಗಿ ಪಟೇಲಲ್ಮಂಜುನಾಥ 2, ಜೆಡಿಎಸ್ನಿಂದ ಸಿ.ಎನ್.ಬಾಲಕೃಷ್ಣ 4, ಕೆಜೆಪಿ ಪಕ್ಷದಿಂದ ಎಂ.ಎ.ಗೋಪಾಲಸ್ವಾಮಿ 2, ಕೋವಿ ಬಾಬಣ್ಣ ಸ್ವತಂತ್ರ ಅಭ್ಯರ್ಥಿಯಾಗಿ 1, ಎ.ಎನ್.ಮಂಜೇಗೌಡ ರಾಜ್ಯ ರೈತ ಸಂಘ, ಅಜುಂನಕುಮಾರ್ ಸ್ವತಂತ್ರ ಪಕ್ಷದ ಅಭರ್ರ್ಥಿಯಾಗಿ 1 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ಸುರೇಶ್ ತಿಳಿಸಿದ್ದಾರೆ.