ತಾಲೂಕು ಕಚೇರಿಯಲ್ಲಿ ಜೆಡಿಎಸ್, ಕೆಜೆಪಿ ಅಭ್ಯರ್ಥಿಗಳ ಮುಖಾಮುಖಿ
ಅರಕಲಗೂಡು: ನಾಮಪತ್ರ ಸಲ್ಲಿಸಲು ಇಲ್ಲಿನ ತಾಲೂಕು ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಎಸ್.ಪುಟ್ಟಸ್ವಾಮಿ ಅವರು, ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಉಮೇದುವಾರಿಕೆ ಸಲ್ಲಿಸುತ್ತಿದ್ದ ಕಾರಣ ಚುನಾವಣಾಧಿಕಾರಿ ಕೊಠಡಿ ಪಕ್ಕದಲ್ಲೇ ಇದ್ದ ತಹಸೀಲ್ದಾರ್ ಕೊಠಡಿಗೆ ತೆರಳಿ ಅಲ್ಲಿ ಕುಳಿತಿದ್ದರು. ಇದೇ ವೇಳೆ ತಹಸೀಲ್ದಾರ್ ಕೊಠಡಿ ಪ್ರವೇಶಿಸಿದ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಎಸ್.ಪುಟ್ಟಸ್ವಾಮಿ ಅವರಿಗೆ ಹಸ್ತಲಾಘವ ನೀಡಿ, ಕುಶಲೋಪರಿ ವಿಚಾರಿಸಿದರು.