ವಿದ್ಯಾರ್ಥಿಗಳಿಂದ ಮಾತೃವಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ,ಹಾಸನ,ಏ.15
ನಗರದ ರಾಮಕೃಷ್ಣ ವಿದ್ಯಾಲಯದಲ್ಲಿ ಭಾನುವಾರ ಮಾತೃವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ಹಾಸನದ ರಾಮಕೃಷ್ಣ ವಿದ್ಯಾಲಯದಲ್ಲಿ ವೇದಭಾರತಿ ಸಂಸ್ಥೆಯಿಂದ ಬಾಲ ಸಂಸ್ಕಾರ ಶಿಬಿರದ ವಿಶೇಷ ಕಾರ್ಯಕ್ರಮದ ಅಂಗವಾಗಿ ಮಾತೃವಂದನೆ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ತಂದೆ, ತಾಯಿ, ಗುರು, ಹಿರಿಯರನ್ನು ಯಾವ ರೀತಿ ಗೌರವಿಸಬೇಕು ಹಾಗೂ ಮಕ್ಕಳಲ್ಲಿ ನಡವಳಿಕೆ ಯಾವ ರೀತಿ ಇರಬೇಕು ಎಂಬ ವಿಚಾರವಾಗಿ ಮಾಹಿತಿ ನೀಡಲಾಯಿತು. ಮಕ್ಕಳು ತಂದೆ ತಾಯಿಗಳಿಗೆ ಪಾದ ಪೂಜೆ ಮಾಡುವ ಮೂಲಕ ನಮನ ಸಲ್ಲಿಸಿದರು. ಹೆತ್ತವರಿಗೆ ತಮ್ಮ ಗೌರವ ಸಮರ್ಪಣೆ ಮಾಡಿದರು.