ಕಾಡಾನೆ ದಾಳಿ: ಮಹಿಳೆಗೆ ತೀವ್ರ ಗಾಯ
ಕನ್ನಡಪ್ರಭ ವಾರ್ತೆ ಹಾಸನ ಏ 16
ಮಹಿಳೆಯೊಬ್ಬರ ಮೇಲೆ ಕಾಡಾನೆಯೊಂದು ದಾಳಿನ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ಸಕಲೇಶಪುರ ತಾಲೂಕಿನ ದೊಡ್ಡನಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ಸಕಲೇಶಪುರ ತಾ. ದೊಡ್ಡನಹಳ್ಳಿಯ ಜಯಮ್ಮ (45) ಕಾಡಾನೆ ದಾಳಿದಿಂದ ತೀವ್ರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಯಮ್ಮ ಬೆಳಗ್ಗೆ ಮನೆಯ ಮುಂದೆ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಕಾಡಾನೆ ಜಯಮ್ಮ ಅವರನ್ನು ಎತ್ತಿ ಎಸೆದಿದೆ. ಕಾಲು ಮತ್ತು ಕೈಗೆ ತೀವ್ರವಾಗಿ ಗಾಯವಾಗಿದ್ದು, ಕಾಲಿನ ಮೂಳೆಗೆ ಭಾರಿ ಪೆಟ್ಟು ಬಿದ್ದಿದೆ. ಕಾಡಾನೆಯನ್ನು ಅಕ್ಕಪಕ್ಕದ ಮನೆಯವರು ಶಬ್ಧ ಮಾಡಿ ಅಲ್ಲಿಂದ ಓಡಿಸಿ, ಕೂಡಲೇ ಈ ವಿಚಾರವನ್ನು ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.