ಕ್ರೈಸ್ತ ಧರ್ಮದ 50 ನೇ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನ ಏ 16
ಚಿಕ್ಕಮಗಳೂರು ಕ್ರೈಸ್ತ ಧರ್ಮ ಕ್ಷೇತ್ರದ 50ನೇ ವರ್ಷದ ಅಂಗವಾಗಿ ಏಸು ಕ್ರಿಸ್ತರ ಮಹಿಮೆ, ಬೈಬಲ್ ಆಧಾರಿತ, ಧ್ವನಿ ಬೆಳಕು ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾ ಕ್ರೀಡಾಂಗಣದಲ್ಲಿ ಏ.19ರಂದು ಸಂಜೆ 6ಕ್ಕೆ ಏರ್ಪಡಿಸಲಾಗಿದೆ ಎಂದು ಫಾದರ್ ಪ್ಯಾಟ್ರಿಕ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮರಿಯಾಪುರದ 250 ಪಾತ್ರಧಾರಿಗಳು ಹಾಗೂ ನೃತ್ಯ ಬಾಲೆಯರು, 10 ಸಾವಿರ ವ್ಯಾಟ್ ಶಕ್ತಿ ಹೊರಹೊಮ್ಮುವ ಧ್ವನಿ ಪ್ರಸಾರ ವ್ಯವಸ್ಥೆ, 150 ಕ್ಕೂ ಹೆಚ್ಚು ಹೊನಲು ಬೆಳಕಿನಲ್ಲಿ ಅದ್ಭುತ ಬೆಳಕಿನ ವಿನ್ಯಾಸ ಹಾಗೂ ಸುಶ್ರಾವ್ಯ ಸಂಗೀತದೊಂದಿಗೆ ಅಭಿನಯಿಸಲಿದ್ದಾರೆ ಎಂದು ಹೇಳಿದರು.
ಅಲ್ಲದೆ ಪರಿಣಿತರ ಕಂಠದಾನ, ನುರಿತ ತಂತ್ರಜ್ಞಾನದ ಧ್ವನಿಗ್ರಹಣ ಹಾಗೂ ಪ್ರಸಿದ್ಧ ಹಿನ್ನೆಲೆ ಗಾಯಕರು, ಕಂಠದಾನ ಕಲಾವಿದರಿಂದ ಧ್ವನಿ ಮುದ್ರಣ ಮಾಡಲಾಗಿದೆ. 82 ಅಡಿಯ ಬೃಹತ್ ವೇದಿಕೆಯಲ್ಲಿ ಪ್ರದರ್ಶನ ನೀಡುವುದಾಗಿ ಹೇಳಿದ ಅವರು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಫಾದರ್ಚಾರ್ಜ್ ಅಂದ್ರಾದೇ, ಫಾದರ್ ಫೆಲಿಕ್ಸ್ಜಾರಿಯೋ, ಫಾದರ್ ಆರೋಗ್ಯರಾಜ್ ಇತರರು ಇದ್ದರು.