ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಥೋತ್ಸವ ಪ್ರಯುಕ್ತ ಮದವಣಿಗೆ ಶಾಸ್ತ್ರ

Mainashree
Updated On : 16 Apr 2013, 10:49 am

ಕನ್ನಡಪ್ರಭ ವಾರ್ತೆ  ಹಾರನಹಳ್ಳಿ  ಏ.16
ಬೈರಾಂಬುಧಿ ಗ್ರಾಮದೇವತೆ ಹೊಂಗ್ಯಮ್ಮದೇವಿ ರಥೋತ್ಸವ ಅಂಗವಾಗಿ ಸಂಕೋಡನಹಳ್ಳಿಯಲ್ಲಿ ಮದವಣಿಗೆ ಶಾಸ್ತ್ರ ಆಯೋಜಿಸಲಾಗಿತ್ತು. ದಿ.ರಾಮೇಗೌಡರ ಮನೆಯಿಂದ ಹೊಂಗ್ಯಮ್ಮದೇವಿ, ಮಲ್ಲಿಗೆಮ್ಮ, ಚಲುವರಾಯಸ್ವಾಮಿ, ಧೂತರಾಯ ಸ್ವಾಮಿ ಹಾಗೂ ರಂಗನಾಥಸ್ವಾಮಿಯನ್ನು ಊರ ಮುಂಭಾಗದ ಕಲ್ಯಾಣಿಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
 ನಂತರ ನಡೆಮುಡಿಯ ಮೇಲೆ ಕಳಶ ಹೊತ್ತ ತಂಡದೊಂದಿಗೆ ಹೊಂಗ್ಯಮ್ಮದೇವಿಯ ವಿಶೇಷ ಜಲೋತ್ಸವ, ಜಲಾಭಿಷೇಕ, ಪುಣ್ಯಾರ್ಚನೆ ಸೇರಿದಂತೆ ಮುತ್ತೈದೆಯರಿಗೆ ಅರಿಶಿನ ಕುಂಕುಮ  ನೀಡುವ ಮೂಲಕ ಕಾರ್ಯಕ್ರಮ ನಡೆಯಿತು. ಆನಂತರ ದೇವರನ್ನು ಗ್ರಾಮದ ಸುತ್ತ ಮೆರವಣಿಗೆ ನಡೆಸಿ ಜಾತ್ರೆಗೆ  ವಿದ್ಯುಕ್ತ ಚಾಲನೆ ನೀಡಲಾಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement