ಅರಸೀಕೆರೆಯಲ್ಲಿ 18 ನಾಮಪತ್ರ ದಾಖಲೆ
ಕನ್ನಡಪ್ರಭ ವಾರ್ತೆ ಅರಸೀಕೆರೆ ಏ.17
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈವರೆಗೆ 18 ಮಂದಿ ನಾಮಪತ್ರ ಸಲ್ಲಿಸಿದಂತಾಗಿದ್ದು ಇದು ಕ್ಷೇತ್ರದ ಇತಿಹಾಸದಲ್ಲೇ ಮೊದಲು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸಂಯುಕ್ತ ಜನತಾದಳದಿಂದ ಒಕ್ಕಲಿಗ ಸಮಾಜದ ಮುಖಂಡ ಬೋರೇಹಳ್ಳಿ ಸೋಮಶೇಖರ್, ಅಂಬೇಡ್ಕರ್ ಜನತಾ ಪಾರ್ಟಿಯಿಂದ ಕುಮಾರಸ್ವಾಮಿ, ಬಹುಜನ ಸಮಾಜವಾದಿ ಪಕ್ಷದಿಂದ ಗಂಡಸಿ ಹೋಬಳಿ ತಿರುಪತಿಹಳ್ಳಿ ಗ್ರಾಮದ ಚಂದ್ರಶೇಖರಯ್ಯ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ.ಲೋಕೇಶ್, ಬಿ.ಎಸ್.ಆರ್. ಕಾಂಗ್ರೇಸ್‌ನಿಂದ ಜೆ.ಪಿ.ಜಯಣ್ಣ ಅಧಿಕೃತ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರೆ ಪಕ್ಷೇತರ ಅಭ್ಯರ್ಥಿಗಳಾಗಿ ಲಲಿತಾ ಜಯಣ್ಣ, ವಕೀಲ ಚಂದ್ರಶೇಖರ್, ನಾಗತೀಹಳ್ಳಿ ಸಂಜಯ್, ಗಂಗಾಧರ್, ರಾಜೇಶ್, ಬಾಲಚಂದ್ರ, ರಾಜೇಂದ್ರಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಇದುವರೆಗೆ ಒಟ್ಟು 18 ಮಂದಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಕಳೆದ ಐದಾರು ದಶಕಗಳ ಇತಿಹಾಸವನ್ನು ಮುರಿದು ದಾಖಲೆ ಸೃಷ್ಟಿಯಾಗಿದೆ.