ಕೆರೆಯಲ್ಲಿ ಪುರಾತನ ಕಾಲುವೆ, ಬಾವಿ ಪತ್ತೆ
ಹಾರನಹಳ್ಳಿ: ಹಾರನಹಳ್ಳಿ ದೊಡ್ಡಕೆರೆಯಲ್ಲಿ ರೈತರು ಜಮೀನುಗಳಿಗೆ ಮಣ್ಣು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಸುಮಾರು 5 ಅಡಿ ಆಳದಲ್ಲಿ ಪುರಾತನ 10 ಅಡಿ ಕಾಲುವೆ, ಹಾಗೂ ಮುಚ್ಚಿ ಹೋಗಿರುವ ಬಾವಿ ಪತ್ತೆಯಾಗಿದೆ. ರೈತಾಪಿ ವರ್ಗದವರು ಬೆಳಗಿನಿಂದಲೇ ಕೆರೆಗೆ ಬಂದು ವೀಕ್ಷಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಗ್ರಾಪಂ ಸದಸ್ಯರಾದ ಹೆಚ್.ಆರ್.ಕೃಷ್ಣಪ್ಪ ಹಿಂದೆ ಬರಗಾಲದ ಸಂದರ್ಭದಲ್ಲಿ ಕೆರೆಯಲ್ಲಿ ಬಾವಿ ನಿರ್ಮಿಸಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.