ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಕಲೇಶಪುರ: 20 ನಾಮಪತ್ರ

Mainashree
Updated On : 17 Apr 2013, 9:59 am

ಕನ್ನಡಪ್ರಭ ವಾರ್ತೆ   ಸಕಲೇಶಪುರ    ಏ.17
ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ 8 ನಾಮಪತ್ರಗಳು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಲ್ಲಿಕೆಯಾದವು. ಈವರೆಗೆ 20 ನಾಮಪತ್ರಗಳನ್ನು ಸಲ್ಲಿಸಲಾಗಿದೆ
ಬಿಎಸ್‌ಆರ್ ಕಾಂಗ್ರೆಸ್‌ನಿಂದ ಗಣೇಶ್, ಬಿಎಸ್‌ಪಿಯಿಂದ ಕುಮಾರ್, ಪಕ್ಷೇತರರಾಗಿ ಡಿ.ಕೆ ಕುಮಾರಸ್ವಾಮಿ, ದೊಡ್ಡೀರಯ್ಯ, ಮೀನಾಕ್ಷಿ, ಆರ್. ದೇವರಾಜ್, ಜೆ.ಸಿ ರವಿ ಹಾಗೂ ಎಚ್.ಸಿ ಸುಬ್ರಮಣ್ಯ ನಾಮಪತ್ರ ಸಲ್ಲಿಸಿದರು.
ಸೋಮವಾರ ನಾಮಪತ್ರ ಸಲ್ಲಿಸಿದ್ದ ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್ ಹಾಗೂ ಮಂಗಳವಾರ ನಾಮಪತ್ರ ಸಲ್ಲಿಸಿದ್ದ ವೀರೇಶ್ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಒಟ್ಟಾರೆ ಕ್ಷೇತ್ರದ ವಿಧಾನ ಸಭಾ ಚುನಾವಣೆಗೆ 20  ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಇದರಲ್ಲಿ 12 ಪಕ್ಷೇತರರು ಹಾಗೂ 8 ಅಭ್ಯರ್ಥಿಗಳು ನಾನಾ ಪಕ್ಷಗಳಿಂದ ನಾಮಪತ್ರ ಸಲ್ಲಿಸಿದ್ದಾರೆ.
ಬಂಡಾಯ ಕಾಂಗ್ರೆಸ್ಸಿಗರೆಂದು ಗುರುತಿಸಿಕೊಂಡಿರುವ ದೊಡ್ಡೀರಯ್ಯ ತಮ್ಮ  ಅಪಾರ ಬೆಂಬಲಿಗರೊಂದಿಗೆ  ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ  ನಾಮಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement