ಹಿಮೋಫಿಲಿಯಾ ಜಾಗೃತಿ ಜಾಥಾ
ಕ.ಪ್ರ.ವಾರ್ತೆ , ಹಾಸನ , ಏ.17
ಹಿಮೋಫಿಲಿಯ ಸೊಸೈಟಿ ವತಿಯಿಂದ ಬುಧವಾರ ವಿಶ್ವ ಹಿಮೋಫಿಲಿಯ ದಿನ ಆಚರಿಸಲಾಯಿತು.
ನಗರದ ಹೇಮಾವತಿ ಪ್ರತಿಮೆಯಿಂದ ವಿಶ್ವ ಹಿಮೋಫಿಲಿಯ ದಿನಾಚರಣೆ ಅಂಗವಾಗಿ ಜಾಥ ನಡೆಸಲಾಯಿತು. ಜಾಥಾದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಹೇಮಾವತಿ ಪ್ರತಿಮೆಯಿಂದ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ , ನಂತರ ನಗರದ ಪ್ರಮುಖ ಬೀದಿಗಳಲ್ಲಿ ವಿಶ್ವ ಹಿಮೋಫಿಲಿಯ ದಿನದ ಬಗ್ಗೆ ಅರಿವು ಮೂಡಿಸಲಾಯಿತು.
ತವರು ಚಾರಿಟೇಬಲ್ಟ್ರಸ್ಟ್ ಸಂಸ್ಥಾಪಕ ಫಾಲಾಕ್ಷ, ಅಮೋಘ್, ಪ್ರಮೋದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.