ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರದಲ್ಲಿ 26 ಉಮೇದುವಾರಿಕೆ

Mainashree
Updated On : 17 Apr 2013, 9:59 am

ಕ.ಪ್ರ. ವಾರ್ತೆ   ಹೊಳೆನರಸೀಪುರ    ಏ.17
ಕ್ಷೇತ್ರದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಬುಧವಾರದ ಅಂತ್ಯಕ್ಕೆ 16 ಅಭ್ಯರ್ಥಿಗಳು ಒಟ್ಟು 26 ನಾಮಪತ್ರಗಳನ್ನು ಇಲ್ಲಿನ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿರುವುದಲ್ಲದೇ, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿಯೂ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿರುವುದು ವಿಶೇಷವಾಗಿದೆ.
ಸಲ್ಲಿಸಿರುವವರ ವಿವರ ಇಂತಿದೆ: ಎಸ್.ಜೆ.ಅನುಪಮ (ಕಾಂಗ್ರೆಸ್), ಎಚ್.ಡಿ.ರೇವಣ್ಣ (ಜೆಡಿಎಸ್), ಹೇಮಂತಕುಮಾರ್(ಬಿಜೆಪಿ), ಯಮುನ(ಕೆಜೆಪಿ), ಡಿ.ಎಚ್.ಸತೀಶ್ (ಜೆಡಿಯು), ಶಿವಣ್ಣ( ಬಿಎಸ್‌ಪಿ), ಶೋಭ (ಬಿಎಸ್‌ಆರ್), ಕೋವಿ ಬಾಬಣ್ಣ (ಪಕ್ಷೇತರ), ಕೃಷ್ಣಪ್ಪ(ಪ), ಕೃಷ್ಣಮೂರ್ತಿ(ಪ), ನಾರಾಯಣ(ಪ), ಮಹೇಶ್(ಪ), ಮಾಳಿಗೇಗೌಡ(ಪ), ಎಂ.ಎನ್.ರಾಜು(ಪ), ಕೆ.ರೇವಣ್ಣ(ಪ), ಕೆ.ರೇವಣ್ಣ (ಪ)  ತಮ್ಮ ಉಮೇದುವಾರಿಕೆಯನ್ನು ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳಾದ ಕೆ.ಎಚ್.ಜಗದೀಶ್, ಸಹಾಯಕ ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಮಂಜುಳ ಹಾಗೂ ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಮಹಮದ್ ಇಸಾಕ್ ಅವರ ಸಮ್ಮುಖದಲ್ಲಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement