15 ನಾಮಪತ್ರ ತಿರಸ್ಕೃತ, 150 ಸ್ವೀಕೃತ
ಹಾಸನ: ಜಿಲ್ಲೆಯಲ್ಲಿ 117 ಉಮೇದುವಾರರಿಂದ ಸಲ್ಲಿಕೆಯಾಗಿದ್ದ 171 ನಾಮಪತ್ರಗಳಲ್ಲಿ 15 ನಾಮಪತ್ರ ತಿರಸ್ಕೃತಗೊಂಡಿದ್ದು, 156 ನಾಮಪತ್ರಗಳು ಸಿಂಧುವಾಗಿವೆ. ವಿಧಾನಸಭಾ ಕ್ಷೇತ್ರವಾರು ತಿರಸ್ಕೃತಗೊಂಡ ನಾಮಪತ್ರಗಳ ವಿವರ: ಶ್ರವಣಬೆಳಗೊಳ ಕ್ಷೇತ್ರ- 18 ಉಮೇದುವಾರರಿಂದ ಸಲ್ಲಿಕೆಯಾಗಿದ್ದ 23 ನಾಮಪತ್ರ ಸಿಂಧುವಾಗಿವೆ.
ಅರಸೀಕೆರೆ ಕ್ಷೇತ್ರ- 18 ಉಮೇದುವಾರರಿಂದ ಸಲ್ಲಿಸಿದ್ದ 22 ನಾಮಪತ್ರಗಳಲ್ಲಿ 1 ನಾಮಪತ್ರ ತಿರಸ್ಕತಗೊಂಡು 21 ಸಿಂಧುವಾಗಿವೆ.
ಬೇಲೂರು ಕ್ಷೇತ್ರ - 15 ಉಮೇದುವಾರರಿಂದ ಸಲ್ಲಿಕೆಯಾಗಿದ್ದ 21 ನಾಮಪತ್ರಗಳಲ್ಲಿ 2 ನಾಮಪತ್ರಗಳು ತಿರಸ್ಕತಗೊಂಡು 19 ನಾಮಪತ್ರ ಸಿಂಧುವಾಗಿವೆ.
ಹಾಸನ ಕ್ಷೇತ್ರ - 15 ಉಮೇದುವಾರರು ಸಲ್ಲಿಸಿದ್ದ 20 ನಾಮಪತ್ರಗಳು ಸಿಂಧುವಾಗಿವೆ.
ಹೊಳೆನರಸೀಪುರ ಕ್ಷೇತ್ರ - 16 ಉಮೇದುವಾರರಿಂದ ಸಲ್ಲಿಕೆಯಾಗಿದ್ದ 26 ನಾಮಪತ್ರಗಳಲ್ಲಿ 1 ನಾಮಪತ್ರ ತಿರಸ್ಕತಗೊಂಡು 25 ನಾಮಪತ್ರಗಳು ಸಿಂಧುವಾಗಿವೆ.
ಅರಕಲಗೂಡು ಕ್ಷೇತ್ರ- 15 ಉಮೇದುವಾರರಿಂದ ಸಲ್ಲಿಕೆಯಾಗಿದ್ದ 26 ನಾಮಪತ್ರಗಳು ಸಿಂಧುವಾಗಿವೆ.
ಸಕಲೇಶಪುರ ಕ್ಷೇತ್ರ- 20 ಉಮೇದುವಾರರಿಂದ ಸಲ್ಲಿಸಿದ್ದ 33 ನಾಮಪತ್ರಗಳಲ್ಲಿ 11 ನಾಮಪತ್ರಗಳು ತಿರಸ್ಕತಗೊಂಡು 22 ನಾಮಪತ್ರಗಳು ಸಿಂಧುವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ತಿಳಿಸಿದ್ದಾರೆ.