ನಾಳೆ ನಗರದಲ್ಲಿ ವಚನ ಸಾಹಿತ್ಯ ಸಮ್ಮೇಳನ
ಕ.ಪ್ರ ವಾರ್ತೆ ಹಾಸನ ಏ. 18
ಜಿಲ್ಲಾ ವಚನ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನ ಏ.20 ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ತಿ.ರಾಮಕೃಷ್ಣಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಹಿತಿ ಡಾ.ಮಳಲಿ ವಸಂತಕುಮಾರ್ ಸಮ್ಮೇಳನಾಧ್ಯಕ್ಷರಾಗಿದ್ದು, ಕರ್ನಾಟಕ ರತ್ನ ನಾಡೋಜ ಡಾ.ದೇ.ಜವರೇಗೌಡರು ಸಮ್ಮೇಳನ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಡಾ.ಮಳಲಿಯವರ ಈಡು ಕಥಾ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ಸಾಹಿತಿ ಬೆಂಗಳೂರಿನ ಯುವಜನ ಸೇವೆ ಇಲಾಖೆ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಪತ್ರಕರ್ತ ರವೀಂದ್ರ ಭಟ್ ಐನಕೈ ಅರಳು ಮಲ್ಲಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಿ.ಡಿ.ಜೋಷಿ, ಸಾಹಿತಿ ಹಾಗೂ ಸಮಾಜ ಸೇವಕ ಡಿ.ಬಿ.ಬಸವೇಗೌಡ, ಸಮಾಜ ಸೇವಕ ಅಟ್ಟಾವರ ರಾಮದಾಸ್, ಸಮಾಜ ಸೇವಕ ಹಾಗೂ ಕಲಾವಿದ ಡಾ.ಎನ್.ರಾಮರೆಡ್ಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಲೀಲಾವತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಸಾಹಿತಿ ಡಾ.ಪಿ.ಎಸ್.ರಾಮಾನುಜಂ ಅವರನ್ನು ಗೌರವಿಸಲಾಗುವುದು. ಸಮ್ಮೇಳನಾಧ್ಯಕ್ಷರನ್ನು ಕುರಿತು ಅಷ್ಠಾವಧಾನಿ ಮತ್ತು ಮಾನಸಗಂಗೊತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿಲಿದ್ದಾರೆ ಎಂದು ವಿವರ ನೀಡಿದರು.
ವಚನಗಾಯನ ಗೋಷ್ಠಿಯಲ್ಲಿ ಸಾಹಿತಿ ಡಾ.ಕೆ.ರಾಮೇಶ್ವರಪ್ಪ ಆಶಯ ನುಡಿ, ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಕೆ.ರಘುರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಆರ್.ಪಿ.ವೆಂಕಟೇಶ್ಮೂರ್ತಿ ಉಪಸ್ಥಿತರಿರುವರು. ಸಮಾಜ ಸೇವಕ ಡಾ.ವೈ.ಎಸ್.ವೀರಭದ್ರಪ್ಪ, ಪ್ರಾಚಾರ್ಯ ಪ್ರೊ..ರೂಪರಾಜಚಂದನ್, ಕಸಾಪ ಮಂಡ್ಯ ಜಿಲ್ಲೆ ಅಧ್ಯಕ್ಷೆ ಮೀರಾಶಿವಲಿಂಗಯ್ಯ, ಪ್ರಾಚಾರ್ಯ ಡಾ.ಎಂ.ಆರ್.ಚಂದ್ರಶೇಖರ್, ಪ್ರಕಾಶಕ ದುಗ್ಗಣನವರು ಹಾಗೂ ಇತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ವಚನ ವಾಚನ ಗೋಷ್ಠಿಯಲ್ಲಿ ಸಾಹಿತಿ ಎಚ್.ಎಲ್.ಶಿವಬಸಪ್ಪ ಹೊರೆಯಾಲ ಆಶಯ ನುಡಿ, ಸಾಹಿತಿ ಡಾ.ಲತಾ ರಾಜಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಮಾಜಿ ಗೌರವ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ್, ಸಾಹಿತಿ ಡಾ.ಪ್ರದೀಪ್ಕುಮಾರ ಹೆಬ್ರಿ ಎನ್.ಕೆ.ರಂಗಸ್ವಾಮಿ, ಪ್ರಾಚಾರ್ಯ ಪ್ರೊ. ಇರ್ಷಾದ್, ಸಾಹಿತಿ ಎ.ಜಿ.ರತ್ನ ಕಾಳೇಗೌಡ, ಉಪನ್ಯಾಸಕಿ ಎಂ.ಕನ್ಯಾಕುಮಾರಿ, ಕುಸುಮ ಪಾಲ್ಗೊಳ್ಳುವರು.
ಪ್ರೊ. ಬೇಲೂರು ರಘುನಂದನ್, ಮೈಸೂರಿನ ಪ್ರೊ. ಕೆ.ಬೈರವಮೂರ್ತಿ, ಮಂಡ್ಯದ ಧರ್ಮರಾಜ ಹಿರೇಮರಳಿ, ಹಾಸನದ ಗೊರೂರು ಅನಂತರಾಜು, ಶಿವಮೊಗ್ಗದ ಜಯಪ್ಪ ಹೊನ್ನಾಳಿ, ಎನ್.ಎಲ್.ಚನ್ನೇಗೌಡ, ಮಂಗಳೂರಿನ ಮಲ್ಲಿಕಾ ಅಜಿತ್ಶೆಟ್ಟಿ, ರಾಮನಗರದ ಹೊಜೇನಹಳ್ಳಿ ಗುಜ್ಜಯ್ಯ, ಬಾ.ನಂ.ಲೋಕೇಶ್, ಬೆಳಗಾವಿಯ ಮಾತಾ ವಾಗ್ದೇವಿ, ಗುಲ್ಬರ್ಗಾದ ಪ್ರೊ. ಶೋಭಾದೇವಿ ಚೆಕ್ಕಿಸೇಡಂ, ಕೊಡಗಿನ ಮೋಹನ್ ಪಾಳೆಯಗಾರ, ನವಾಬ ಬೇಲೂರು, ಸುಶೀಲ ಸೋಮಶೇಖರ್, ಸತ್ಯನಾರಾಯಣ, ದಾವಣಗೆರೆಯ ಕೊಟ್ರೇಶ್ ಎಸ್.ಉಪ್ಪಾರ್, ಹೊನ್ನಶೆಟ್ಟಿಹಳ್ಳಿಯ ಗಿರಿರಾಜ್, ತುಮಕೂರಿನ ಸಿದ್ದರಾಜು ಐವಾರ್ ವಚನ ವಾಚಿಸಲಿದ್ದಾರೆ ಎಂದು ಹೇಳಿದರು.