ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯುವಕ ನಾಪತ್ತೆ

Mainashree
Updated On : 18 Apr 2013, 10:07 am

ಕನ್ನಡಪ್ರಭ ವಾರ್ತೆ  ಚನ್ನರಾಯಪಟ್ಟಣ  ಏ. 18
ಪಟ್ಟಣದ ಗಾಯಿತ್ರಿ ಬಡಾವಣೆಯ ರಾಘವೇಂದ್ರ ಎಂಬುವರ ಸಹೋದರ ಅಶೋಕ (19) ಮನೆಯಿಂದ ಹೊರಗೆ ಹೋದವನು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದನು ಎಂದು ಅಣ್ಣ ರಾಘವೇಂದ್ರ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ ಕಳವು
ಹೊಳೆನರಸೀಪುರ: ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ಹೆಬಸೂರು ಗ್ರಾಮದ ದಿನೇಶ ಎಂಬುವರು  ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂದೆ ನಿಲ್ಲಿಸಿದ್ದ 25 ಸಾವಿರ ರು. ಮೌಲ್ಯದ ಹಿರೋಹೊಂಡಾ ಬೈಕನ್ನು ಕಳ್ಳರು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಬಗ್ಗೆ ದಿನೇಶ್ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಹಿಳೆ ನಾಪತ್ತೆ
ಹಾಸನ: ನಗರದ ರಂಗೋಲಿಹಳ್ಳ ವಾಸಿ ಮಧು ಎಂಬವರ ಪತ್ನಿ ಕಾವ್ಯ (20) ಮನೆಯಿಂದ ಎಂದಿನಂತೆ ವಿದ್ಯಾನಗರದ ಜೆ.ಜೆ. ವಂಡರ್ ಪಾಷ್ ಅಂಗಡಿಗೆ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ, ಗೋಧಿ ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಮೆರೂನ್ ಕಲರ್ ಚೂಡಿದಾರ ಧರಿಸಿದ್ದರು ಎಂದು ಆಕೆಯ ಪತಿ ಮಧು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಲಾರಿ ಕಳವು
ಹಾಸನ: ತಾಲೂಕಿನ ಕೆ. ಹೊಸಕೊಪ್ಪಲು ಗ್ರಾಮದ ಜಿ.ಜಿ ವಿಜಯಮೂರ್ತಿ ಗ್ರಾಮದ ಹೊಳೆನರಸೀಪುರ ರಸ್ತೆಯ  ಎಚ್.ಪಿ. ಪೆಟ್ರೋಲ್ ಬಂಕ್ ಪಕ್ಕದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 4.50 ಲಕ್ಷ ರು. ಮೌಲ್ಯದ ಲಾರಿಯನ್ನು ಕಳ್ಳರು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಬಗ್ಗೆ  ವಿಜಯಮೂರ್ತಿ ಬಡಾವಣೆ ಠಾಣೆಗೆ ದೂರು ನೀಡಿದ್ದು,  ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ವಶ
ಅರಸೀಕೆರೆ: ಅಕ್ರಮ ಮದ್ಯ ವಶಪಡಿಸಿಕೊಂಡಿರುವ ಘಟನೆ ಹಾರನಹಳ್ಳಿ ಸರ್ಕಲ್‌ನಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ಹಾರನಹಳ್ಳಿ ಸರ್ಕಲ್ ಅರಳಿ ಮರದ ಹತ್ತಿರ ಬೈರಾಂಬುದಿ ಗ್ರಾಮದ ಒಬ್ಬ ವ್ಯಕ್ತಿಯು ಒಂದು ಅಕ್ಕಿ ತುಂಬುವ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಬೈರಾಂಬುದಿಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗಲು ಬಸ್ಸಿಗೆ ಕಾಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿ 3500 ರು. ಬೆಲೆಯ 48 ಓಟಿ ಸಾಚೆಟ್‌ಗಳು ಮತ್ತು 50 ರಾಜಾವಿಸ್ಕಿ ಮದ್ಯ ಇರುವ ಸಾಚೆಟ್‌ಗಳನ್ನು ವಶಪಡಿಕೊಂಡಿದ್ದಾರೆ. ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾಸ್ ಸಿಲೆಂಡರ್ ಕಳವು
ಚನ್ನರಾಯಪಟ್ಟಣ: ಶಾಲೆಯ ಬೀಗ ಮುರಿದು ಗ್ಯಾಸ್ ಸಿಲೆಂಡರ್ ಕಳವಾಗಿರುವ ಘಟನೆ ನುಗ್ಗೇಹಳ್ಳಿಯಲ್ಲಿ ನಡೆದಿದೆ. ತಾ. ಅಕ್ಕನಹಳ್ಳಿಕೂಡಿನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ರಂಗೇಗೌಡ ರವರು ಡಾ.ಅಂಬೇಡ್ಕರ್ ಜಯಂತಿ ಆಚರಣೆ ಮಾಡಿ, ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದು, ವಾಪಸ್ಸು ಮಂಗಳಾರ ಬೆಳಗ್ಗೆ ಶಾಲೆಗೆ ಬಂದು ನೋಡಿದಾಗ ಶಾಲೆಯ ದಾಸ್ತಾನು ಕೊಠಡಿಯ ಬೀಗ ಮುರಿದು ಒಳನುಗ್ಗಿ ಸರ್ಕಾರದಿಂದ ವಿತರಿಸಿದ್ದ 2500 ರು. ಬೆಲೆಯ ಎಲ್‌ಪಿಜಿ ಸಿಲೆಂಡರ್ ಕಳವಾಗಿರುವುದು ಕಂಡುಬಂದಿದೆ. ಶಿಕ್ಷಕ ರಂಗೇಗೌಡ ರವರು ನುಗ್ಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement