ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಮನಾಥಪುರ: ಭಾರಿ ಬೆಲೆಯ ಅಕ್ರಮ ಬೀಟೆ ಮರಗಳ ವಶ

Mainashree
Updated On : 18 Apr 2013, 10:06 am

ಕನ್ನಡಪ್ರಭ ವಾರ್ತೆ  ರಾಮನಾಥಪುರ  ಏ.18
ಹಂಡ್ರಂಗಿ ಪಂಚಾಯಿತಿ ವ್ಯಾಪ್ತಿಯ ತರಗಳಲೆ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಇರಿಸಿದ್ದ ಭಾರಿ ಬೆಲೆಬಾಳುವ ಬೀಟೆ ಮರ ಪತ್ತೆಯಾಗಿದ್ದು, ಮಡಿಕೇರಿ ಅರಣ್ಯ ತನಿಖಾ ದಳ, ರಾಮನಾಥಪುರ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇಲ್ಲಿನ ಸುಳುಗೋಡು ಸೋಮವಾರ, ತರಗಳಲೆ, ಹೊನಗಾನಹಳ್ಳಿ, ಹಂಡ್ರಂಗಿ, ಕಾರ್ಗಲ್, ಕೊಂಗಾಳೆ ವ್ಯಾಪ್ತಿಯಲ್ಲಿ ಬಾರಿ ಬೆಲೆ ಬಾಳುವ ಬೀಟೆ ತೇಗ, ಹೊನ್ನೆ, ನಂದಿ ಮರಗಳ ಮರಗಳ್ಳತನ ಹೆಚ್ಚಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿತ್ತು. ಗುರುವಾರ ಖಚಿತ ಮಾಹಿತಿ ಮೇರೆಗೆ ತರಗಳಲೆ ಗ್ರಾಮದ ಪಟೇಲ್ ಪುಟ್ಟಸ್ವಾಮಿಗೌಡ ಎಂಬಾತನ ಹೊಲದಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಕಪ್ಪುಬೀಟೆ ಮರವನ್ನು ಮಡಿಕೇರಿ ಜಿಲ್ಲಾ ಅರಣ್ಯ ಅಧಿಕಾರಿ ಮೋಹನ್ ನೇತೃತ್ವದಲ್ಲಿ ಮತ್ತು ರಾಮನಾಥಪುರ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದ್ದಾರೆ.  ಇಲಾಖೆಯವರು ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಆರೋಪಿ ಪಟೇಲ್ ಪುಟ್ಟಸ್ವಾಮಿಗೌಡ ಮತ್ತು ಮಗ ಶರತ್ ನಾಪತ್ತೆಯಾಗಿದ್ದಾರೆಂದು ಮಡಿಕೇರಿ ಜಿಲ್ಲಾ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.ಮಡಿಕೇರಿ ಅರಣ್ಯ ಇಲಾಖೆಯ  ಆರ್.ಎಫ್.ಹೇಮಂತ್‌ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೆ.ಎನ್.ದೇವಯ್ಯ, ಅನಿಲ್ ಡಿಸೋಜ, ಕಾರ್ಯಪ್ಪ, ಗಾರ್ಡ್ ಸುರೇಶ್, ಚಾಲಕ ಚಂದ್ರು ಮಲ್ಲಯ್ಯ, ಮಂಜುನಾಥ್, ಪುನೀತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement