ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರ ಕ್ಷೇತ್ರ: ಎಲ್ಲ ನಾಮಪತ್ರ ಸ್ವೀಕೃತ

Mainashree
Updated On : 18 Apr 2013, 10:05 am

ಕ.ಪ್ರ. ವಾರ್ತೆ  ಹೊಳೆನರಸೀಪುರ  ಏ.18
ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದು ಎಲ್ಲಾ 16 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ ಎಂದು  ಚುನಾವಣಾಧಿಕಾರಿ ತಿಳಿಸಿದ್ದಾರೆ.
 ಇವುಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸ ಬಯಸಿ ನಾಮಪತ್ರವನ್ನು ಸಲ್ಲಿಸಿದ್ದ ಎಂ.ಎನ್.ರಾಜು  ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದರು.
 ನಾಮಪತ್ರದಲ್ಲಿ ಬಿಜೆಪಿಯಿಂದ ಅಧೀಕೃತ ಬಿ-ಫಾರಂ ಸಲ್ಲಿಸದ ಕಾರಣದಿಂದಾಗಿ ಪಕ್ಷದ ನಾಮಪತ್ರ ತಿರಸ್ಕತಗೊಂಡು ಪಕ್ಷೇತರವಾಗಿ ಸಲ್ಲಿಸಿದ್ದ ನಾಮಪತ್ರ ಮಾತ್ರ  ಊರ್ಜಿತಗೊಂಡಿದ್ದು ಅವರು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರವನ್ನು ಮಾತ್ರ ಪರಿಗಣಿಸಲಾಗಿದ್ದು ಉಳಿದ ಎಲ್ಲರ ನಾಮಪತ್ರ ಸ್ವೀಕೃತಗೊಂಡಿದೆ.
ಸ್ವೀಕೃತಗೊಂಡ ಅಭ್ಯರ್ಥಿಗಳ ವಿವರ: ಎಸ್.ಜಿ.ಅನುಪಮ (ಕಾಂಗ್ರೆಸ್), ಎಚ್.ಡಿ.ರೇವಣ್ಣ (ಜೆಡಿಎಸ್), ಎಂ.ಸಿ.ಶಿವಣ್ಣ (ಬಿಎಸ್‌ಪಿ), ಜಿ.ಟಿ.ಹೇಮಂತ್ ಕುಮಾರ್ (ಬಿಜೆಪಿ), ಎಚ್.ಎಲ್.ಯಮುನ (ಕೆಜೆಪಿ), ಶೋಭ(ಬಿಎಸ್‌ಪಿ), ಡಿ.ಎಚ್.ಸತೀಶ್(ಜೆಡಿಯು), ಎಚ್.ಆರ್.ಕೃಷ್ಣಪ್ಪ (ಪಕ್ಷೇತರ), ಎಚ್.ಕೃಷ್ಣಮೂರ್ತಿ (ಪ), ಕೋವಿಬಾಬಣ್ಣ(ಪ), ಕೆ.ಆರ್.ನಾರಾಯಣ್ (ಪ) ಎಂ.ಮಹೇಶ್ (ಪ) ಮಾಳಿಗೆಗೌಡ (ಪ), ಎಂ.ಎನ್.ರಾಜು (ಪ), ಕೆ.ರೇವಣ್ಣ(ಹೊಳೆನರಸೀಪುರ) (ಪ), ಕೆ.ರೇವಣ್ಣ (ಚಿಕ್ಕಮಗಳೂರು) (ಪ) ಇವರ ನಾಮಪತ್ರಗಳು ಸಿಂಧುವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
 ಶನಿವಾರ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನವಾಗಿದ್ದು ಅಂತಿಮ ಪಟ್ಟಿ ಏಪ್ರಿಲ್ 20 ರಂದು ಶನಿವಾರ ಸಂಜೆ ನಿರ್ಧಾರವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement