ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

27, 28ರಂದು ಮಹಿಳಾ ವಕೀಲರ ರಾಜ್ಯ ಮಟ್ಟದ ಸಮ್ಮೇಳನ

Vishwanath S
Updated On : 19 Apr 2013, 11:07 am

ಹಾಸನ: ಅಖಿಲ ಕರ್ನಾಟಕ ಮಹಿಳಾ ವಕೀಲರ ರಾಜ್ಯ ಮಟ್ಟದ ಸಮಾವೇಶ ಏ.27 ಮತ್ತು 28ರಂದು ನಡೆಯಲಿದೆ ಎಂದು ಜಿಲ್ಲಾ ಮಹಿಳಾ ವಕೀಲರ ಸಂಘದ ಉಪಾಧ್ಯಕ್ಷೆ ಭಾನು ಮುಷ್ತಾಕ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಸಮಾವೇಶಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಘೇಲಾ, ಕೆ.ಎಲ್.ಮಂಜುನಾಥ್, ಎನ್.ಕೆ.ಪಾಟೀಲ್, ಅಂತಾರಾಷ್ಟ್ರೀಯ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷೆ ಶೀಲಾ ಅವರು ಸಹ ಭಾಗವಹಿಸಲಿದ್ದು, ಕಾರ್ಯಕ್ರಮವು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದರು. ಸಮಾವೇಶದಲ್ಲಿ ಬಾಡಿಗೆ ತಾಯಿತನ ಮತ್ತು ಮಧ್ಯಸ್ಥಿಕೆ ಬಗ್ಗೆ ವಿಚಾರ ಸಂವಾದ ನಡೆಯಲಿದೆ. ಅಲ್ಲದೆ ಮಹಿಳೆಯರು ಹಾಗೂ ಮಕ್ಕಳ ಪರವಾಗಿ ಇರುವಂತಹ ಕಾನೂನು ಹಾಗೂ ಮತ್ತಷ್ಟು ಕಾನೂನುಗಳ ಅನುಷ್ಠಾನದ ಬಗ್ಗೆ ಸಂವಾದ ನಡೆಯಲಿದೆ. ಜತೆಗೆ ಕಾನೂನು ಸಾಕ್ಷರತಾ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ 1 ಸಾವಿರ ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದು, ಹೊರಗಿನಿಂದ ಬರುವಂತಹ ಪ್ರತಿನಿಧಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ 20 ಲಕ್ಷ ವೆಚ್ಚವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎ.ಎಂ. ಮಂಗಳಮ್ಮ, ಎಂ.ಬಿ. ಗಿರಿಜಾಂಬ, ಕೋಮಲ, ನಳಿನಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement