ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಮೀನಿನಲ್ಲಿ ಆಂಜನೇಯ ವಿಗ್ರಹ ಪತ್ತೆ, ಪೂಜೆ

Mainashree
Updated On : 20 Apr 2013, 9:51 am

ಅರಸೀಕೆರೆ: ತಾಲೂಕಿನ ಅಣ್ಣಾಯಕನಹಳ್ಳಿ ಜಮೀನಿನಲ್ಲಿ ಪತ್ತೆಯಾದ ಪುರಾತನ ಆಂಜನೇಯ ವಿಗ್ರಹಕ್ಕೆ ರಾಮನವಮಿ ಅಂಗವಾಗಿ ಶುಕ್ರವಾರ ಹೋಮ, ಹವನ ಹಾಗೂ ವಿಶೇಷ ಪೂಜೆ ನಡೆಸಲಾಯಿತು. ಬೆಲಗೂರಿನ ಬಿಂದುಮಾಧವಶರ್ಮಾ ಶ್ರೀಗಳ ಸಲಹೆ ಮೇರೆಗೆ ಶುಕ್ರವಾರ ಬೆಳಗ್ಗೆಯಿಂದಲೇ ಗಣಪತಿ ಹೋಮ, ಗಾಯಿತ್ರಿ ಹೋಮ, ರುದ್ರಹೋಮ ನಡೆಸಲಾಯಿತು. ಇದೇ ವೇಳೆ ಆಂಜನೇಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ನಾನಾ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸುತ್ತಮುತ್ತಲ ಗ್ರಾಮದ ಜನರು ಭಕ್ತಿಭಾವ ಸಮರ್ಪಿಸಿದರು. ಭಕ್ತಾಧಿಗಳಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement