ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮೇ 1ಕ್ಕೆ ರಾಹುಲ್ ಗಾಂಧಿ ಆಗಮನ'

Mainashree
Updated On : 19 Apr 2013, 9:48 am

ಚನ್ನರಾಯಪಟ್ಟಣ: ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲು ಏ.25ರಂದು ಪಕ್ಷದ ಅಧ್ಯಕ್ಷರಾದ ಜಿ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಆಗಮಿಸಲಿದ್ದು, ಮೇ 1ರಂದು ತಮ್ಮ ಪಕ್ಷದ ಯುವ ನಾಯಕ ರಾಹುಲ್‌ಗಾಂಧಿ ಆಗಮಿಸಲಿದ್ದಾರೆ ಎಂದು ಶ್ರವಣಬೆಳಗೊಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್ ಪುಟ್ಟೇಗೌಡ ತಿಳಿಸಿದರು.  ಜಿಪಂ ಸದಸ್ಯ ನಂಜುಂಡೇಗೌಡ ಮಾತನಾಡಿ ತಾಲೂಕಿನಲ್ಲಿ ಕಾಂಗ್ರೆಸ್ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರದೆ ಸ್ಥಿರತೆ ಕಳೆದುಕೊಂಡಿದೆ. ಸಿ.ಎಸ್. ಪುಟ್ಟೇಗೌಡ ಅವರು ಎಲ್ಲಾ ರೀತಿಯಲ್ಲಿ ಶಕ್ತಿ ತುಂಬಬೇಕು ಎಂದರು. ತಾಲೂಕಿನಲ್ಲಿ ಅಶಾಂತಿ ವಾತಾವಾರಣ ನಿರ್ಮಾಣವಾಗಿದ್ದು, ಪೋಲಿಸ್ ಇಲಾಖೆ ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯ ಮರೆತಿದೆಯೋ ಅಥವಾ ಬೇರೊಬ್ಬರ ತಾಳಕ್ಕೆ ಕುಣಿಯುತ್ತಿದೆಯೋ ತಿಳಿಯದಾಗಿದೆ ಎಂದು ತಿಳಿಸಿದರು.  
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಗೋಪಾಲಸ್ವಾಮಿ, ಚಂದ್ರೇಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲಿತಮ್ಮ, ಜಿಪಂ ಸದಸ್ಯ ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement