ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾಲ ಬಾಧೆ; ರೈತ ಆತ್ಮಹತ್ಯೆ

Mainashree
Updated On : 19 Apr 2013, 9:49 am

ಅರಕಲಗೂಡು: ಸಾಲದ ಹೊರೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕೊಣನೂರು ಹೋಬಳಿ, ಕಬ್ಬಳಿಗೆರೆ ಗ್ರಾಮದಲ್ಲಿ ನಡೆದಿದೆ. ರೈತ ರಮೇಶ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಾಲ ಕೊಟ್ಟವರ ಒತ್ತಡಕ್ಕೆ ಹೆದರಿ ಮನೆಯೊಳಗೆ ರಾತ್ರಿ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ ಸುಮಾರು 4 ಲಕ್ಷ ಸಾಲ ಮಾಡಿದ್ದು, ಹುಲಿಕಲಲ್ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನಲ್ಲಿ ಬೆಳೆ ಸಾಲವಾಗಿ 50 ಸಾವಿರ ರೂಗಳನ್ನು ಪಡೆದಿದ್ದು, ಇದಕ್ಕೆ ಸಂಭಂದಿಸಿದಂತೆ ಬ್ಯಾಂಕ್ ನೋಟಿಸ್ ನೀಡಿತ್ತು ಎಂದು ತಿಳಿದು ಬಂದಿದೆ. ಎಲ್ಲಾ ಸಾಲವನ್ನು ತಂಬಾಕು ಮತ್ತು ಭತ್ತದ ಬೆಳೆಯನ್ನು ಪಡೆದ ನಂತರ ಅವುಗಳನ್ನು ಮಾರಾಟ ಮಾಡಿ ಸಾಲ ತೀರಿಸಬೇಕೆಂದುಕೊಂಡಿದ್ದರು.
 ಕೈಸಾಲಗಾರರಿಗೆ ನೀಡಿದ್ದ ಚೆಕ್ ಅವಧಿ ಮುಗಿದಿದ್ದರಿಂದ ಸಾಲ ಕೊಟ್ಟವರು ನ್ಯಾಯಾಲಯದ ಮೆಟ್ಟಿಲೇರಿ ದಾವೆ ಹೂಡಿದ್ದರು.
ನ್ಯಾಯಾಲಯದಿಂದ ಬಂದ ಸಮನ್ಸ್: ಕಳೆದ ವಾರ ಕೊಣನೂರು ಪೊಲೀಸರು ಮನೆಗೆ ಬಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದ್ದರು. ಅಂದಿನಿಂದ ಮನೆಯಲ್ಲಿ ಯಾರೊಡನೆ ಮಾತನಾಡದೆ ಮಂಕಾಗಿದ್ದ ರಮೇಶ ಗುರುವಾರ ತನ್ನ ಹೆಂಡತಿ ಸುನಂದರವರನ್ನ ಮಗಳ ಮನೆಗೆ ಕಳುಹಿಸಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗೆ ಹಗ್ಗದಿಂದ ನೇಣು ಬಿಗಿದುಕೊಂಡಿರುವ ಘಟನೆ ನಡೆದಿದೆ. ಪ್ರಕರಣವನ್ನು ಕೊಣನೂರು ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಕೊಣನೂರು ಹೋಬಳಿ ರೆವಿನ್ಯೂ ಇನ್ಸ್‌ಪೆಕ್ಟರ್ ಸೋಮಣ್ಣ ಸ್ಥಳ ಪರಿಶೀಲಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement