'ಸಿದ್ದರಾಮಯ್ಯ, ವಿಶ್ವನಾಥ್ ಬೇಜವಾಬ್ದಾರಿ ಹೇಳಿಕೆ'
ಚನ್ನರಾಯಪಟ್ಟಣ: ಬೆಂಗಳೂರಿನ ಬಿಜೆಪಿ ಕಚೇರಿ ಎದುರು ನಡೆದ ಬಾಂಬ್ ಸ್ಫೋಟದ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಟೀಕಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರಲ್ಲಿ ಅನುಕಂಪ ಮೂಡಿಸಲು ಬಿಜೆಪಿಯವರು ಬಾಂಬ್ ಸ್ಫೋಟಿಸಿ ಕೊಂಡಿದ್ದಾರೆ ಎಂದು ಈ ಮುಖಂಡರು ಹೇಳಿರುವುದು ಅವರ ಘನತೆಗೆ ತಕ್ಕುದಲ್ಲ ಎಂದರು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಲು ಶಂಕಿತ ಉಗ್ರರು ಆಂಧ್ರಪ್ರದೇಶದ ಮೋಟಾರ್‌ಬೈಕ್‌ಗೆ ತಮಿಳುನಾಡಿನ ನಂಬರ್ ಪ್ಲೇಟ್ ಹಾಕಿ ಬಿಜೆಪಿ ಕಟೇರಿ ಮುಂದೆ ಬಾಂಬ್ ಸ್ಫೋಟಿಸಿದ್ದಾರೆ ಈ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ ಎಂದು ತಿಳಿಸಿದರು. ಶ್ರವಣಬೆಳಗೊಳ ಕ್ಷೇತ್ರದ ಅಭ್ಯರ್ಥಿ ಪಟೇಲ್ ಮಂಜುನಾಥ್ ಮಾತನಾಡಿದರು.