ಅಕ್ರಮ ಮದ್ಯ ಮಾರಾಟ: 12 ಮಂದಿ ವಿರುದ್ಧ ದೂರು ದಾಖಲು
ಹೊಳೆನರಸೀಪುರ: ಇಲ್ಲಿನ ಅಬಕಾರಿ ಇಲಾಖೆಯಿಂದ ತಾಲೂಕಿನ ನಾನಾ ಭಾಗಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಏ.1ರಿಂದ ಏ.18ರ ವರೆಗೆ 6 ಪ್ರಕರಣ ಪತ್ತೆ ಹಚ್ಚಿ 12 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕರಾದ ಎಚ್.ಡಿ.ರಮ್ಯ, ಎಸ್.ಎಂ.ಶೈಲಜಾ ತಿಳಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ಹೂವಪ್ಪಗೌಡ ಹಾಗೂ ಅಬಕಾರಿ ಉಪ ನಿರೀಕ್ಷಕಿ ಡಾ.ಮಹದೇವಿ ಬಾಯಿ ನಿರ್ದೇಶನ ಮೇರೆಗೆ, ಅಬಕಾರಿ ನಿರೀಕ್ಷಕ ಬಿ.ಎಸ್.ದೇವರಾಜಪ್ಪ ನೇತೃತ್ವದಲ್ಲಿ ರಕ್ಷಕ ರಮೇಶ್ ಹಾಗೂ ವಾಹನ ಚಾಲಕ ಸತೀಶ್ ಅವರ ತಂಡ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟದ ಪ್ರಕರಣಗಳನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಮಂಗಳಾಪುರ ಗ್ರಾಮದ ದ್ಯಾವಮ್ಮ, ಹಳ್ಳಿಮೈಸೂರು ಹೋಬಳಿಯ ಶ್ರವಣೂರಿನ ಬಸವಶೆಟ್ಟಿ, ಹಳ್ಳಿಮೈಸೂರು ಹೋಬಳಿಯ ಹಾರಗೌಡನಹಳ್ಳಿಯ ಚಿಕ್ಕೇಗೌಡ, ಹಂಗರಹಳ್ಳಿಯ ಅಧಿಕೃತ ವೆಂಡರ್ ಧರಣಿಕುಮಾರ್, ಡಿ.ಬಿ.ರಘು, ಡಿ.ಬಿ.ಆನಂದ್, ಹಳ್ಳಿಮೈಸೂರು ಹೋಬಳಿಯ ನಿಡುವಣಿಯ ನವೀನ್, ಹಂಗರಹಳ್ಳಿಯ ಧರ್ಮೇಂದ್ರ, ಜಿ.ಒ.ಪರಮೇಶ್, ದೊಡ್ಡಹಳ್ಳಿಯ ಯೋಗೇಶ್, ಎ.ಎನ್.ಮಾದವೇಗೌಡ ಹಾಗೂ ಕಸಬಾ ಹೋಬಳಿಗೆ ಸೇರಿದ ಕಲ್ಲುಬ್ಯಾಡರಹಳ್ಳಿಯ ಪುಟ್ಟಮ್ಮ ಅವರ ವಿರುದ್ಧ ದೂರು ದಾಖಲಿಸಿದ್ದಾರೆಂದರು.