ಶಾಲಾ ದಾಖಲಾತಿ: ಹೆಚ್ಚುವರಿ ಶುಲ್ಕ ಪಡೆಯದಂತೆ ಸೂಚನೆ
ಹಾಸನ: ಸರ್ಕಾರಿ ಆದೇಶದಂತೆ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದಾಖಲಾತಿ ವೇಳೆ ನಿಗದಿತ ಶುಲ್ಕ ಹೊರತುಪಡಿಸಿ ವಂತಿಗೆ ಅಥವಾ ಇತರೆ ಮೊತ್ತವನ್ನು ಪ್ರವೇಶದ ಷರತ್ತಾಗಿ ಸ್ವೀಕರಿಸುವಂತಿಲ್ಲ.
ವಿದ್ಯಾರ್ಥಿಗಳಿಗೆ ಬ್ಯಾಗು, ಸಮವಸ್ತ್ರ, ಟೈ, ಬೂಟು ಮತ್ತು ಇತರೆ ಸಾಮಾಗ್ರಿ ವಿತರಿಸುವಂತಿಲ್ಲ ಎಂದು ಎಚ್ಚರಿಸಲಾಗಿದೆ.
ವಂತಿಗೆ ಅಥವಾ ಹಣ ನೀಡುವಂತೆ ಮತ್ತು ಸಾಮಗ್ರಿಗಳನ್ನು ಖರೀದಿಸಲು ಒತ್ತಾಯಿಸಿದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರ, ಹಾಸನ ಅಥವಾ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಸನ ಇವರಿಗೆ ದೂರು ನೀಡುವಂತೆ ಕೋರಲಾಗಿದೆ.