ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ 14,200 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 8050 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.50 ಅಡಿಯಾಗಿದ್ದು, 36.619 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.398 ಅಡಿ, ಒಳ ಹರಿವು 850 ಕ್ಯುಸೆಕ್, ಹೊರ ಹರಿವು ನಾಲೆಗೆ 200, ನದಿಗೆ 600 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3163.54 ಅಡಿ, ಒಳ ಹರಿವು 210 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಟಿಎಂಸಿಯಲ್ಲಿ 1.187 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಆಲೂರು 9, ಅರಕಲಗೂಡು 0.1, ಅರಸೀಕೆರೆ 0.5, ಹಾಸನ 7.2, ಸಕಲೇಶಪುರ 6.4, ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 9, ಪಾಳ್ಯ 9.4, ಕೆಂಚಮ್ಮನಹೊಸಕೋಟೆ 11, ಕುಂದೂರು 2.2, ಅರಕಲಗೂಡು 0.1 ಮಲ್ಲಿಪಟ್ಟಣ 1, ದೊಡ್ಡಮಗ್ಗೆ 1.4, ಅರಸೀಕೆರೆ ಕಸಬ 0.5, ಗಂಡಸಿ 4.8, ಕಣಕಟ್ಟೆ 0.4, ಜಾವಗಲ್ 16, ಬಾಣಾವರ 2,ಯಳವಾರೆ 1.6, ಬೇಲೂರು ತಾ. ಅರೇಹಳ್ಳಿ 5.2, ಬಿಕ್ಕೋಡು 2.8, ಗೆಂಡೆಹಳ್ಳಿ 5.2, ಹಾಸನ ಕಸಬ 7.2 ತಾ. ಕಟ್ಟಾಯ 3.8, ಶಾಂತಿಗ್ರಾಮ 6, ಸಾಲಗಾಮೆ 1.2, ದುದ್ದ 0.6, ಸಕಲೇಶಪುರ ಕಸಬ 6.4, ಬಾಳ್ಳುಪೇಟೆ 14.1, ಬೆಳಗೋಡು 8, ಯಸಳೂರು 2, ಹೊಸೂರು 5.6, ಹೆತ್ತೂರು14.2, ಶುಕ್ರವಾರ ಸಂತೆ 7.3, ಮಿ.ಮೀಟರ್ ಮಳೆಯಾಗಿದೆ. ಚನ್ನರಾಯಪಟ್ಟಣ ತಾ. ಬಾಗೂರು 3.2, ನುಗ್ಗೇಹಳ್ಳಿ 12.8, ಶ್ರವಣಬೆಳಗೊಳ 6.8, ಹಿರಿಸಾವೆ 2.8, ಮಿಮೀ ಮಳೆಯಾಗಿದೆ.