ಫಲಿತಾಂಶ ಪ್ರಕಟ
ಹಾಸನ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-06ರ ಕರಾಮುವಿ ವತಿಯಿಂದ 2012-13ನೇ ಸಾಲಿನ ಏಪ್ರಿಲ್ ಮೇನಲ್ಲಿ ನಡೆದ ಬಿ.ಎ. ಪರೀಕ್ಷಾ ಫಲಿತಾಂಶ ಪ್ರಕಟಿಸಿದೆ. ವಿದ್ಯಾರ್ಥಿಗಳು ಕರಾಮುವಿಯ ಅಂತರ್ಜಾಲ ಢಿಢಿಢಿ.್ಞಡ್ಟ್ಡಟಣಡ್ಟ್ಠಜ.ಜಜ್ಡ.್ಝಟಿ ಇದರಲ್ಲಿ ಫಲಿತಾಂಶ ಪಡೆಯಬಹುದು. ಮರುಮೌಲ್ಯಮಾಪನಕ್ಕೆ 20 ದಿನದೊಳಗಾಗಿ ಕುಲಸಚಿವರು (ಪರೀಕ್ಷಾಂಗ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-06 ವಿಳಾಸಕ್ಕೆ ಅರ್ಜಿ ಸಲ್ಲಿಸತಕ್ಕದ್ದು. ಮಾಹಿತಿಗಾಗಿ 08172-269244 ಸಂಪರ್ಕಿಸಬೇಕೆಂದು ಪ್ರಾದೇಶಿಕ ನಿರ್ದೇಶಕ ಪಿ. ಹರೀಶ್ ತಿಳಿಸಿದ್ದಾರೆ.
12ಕ್ಕೆ ಸಾಮಾನ್ಯ ಸಭೆ
ಹಾಸನ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ಆಗಸ್ಟ್ 12ರಂದು ಮಧ್ಯಾಹ್ನ 12-05 ಕ್ಕೆ ಜಿಲ್ಲಾ ಪಂಚಾಯ್ತಿಯ ಹೊಯ್ಸಳ ಸಭಾಂಗಣದಲ್ಲಿ ಸಾಮಾನ್ಯ ಸಭೆ ಜರುಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಯು.ಪಿ.ಸಿಂಗ್ ತಿಳಿಸಿದ್ದಾರೆ.
ಖಜಾನಾಧಿಕಾರಿ ಸೂಚನೆ
ಹಾಸನ: ನಗರದ ಉತ್ತರ ಬಡಾವಣೆ ನಿವಾಸಿ ಶ್ರೀನಿವಾಸಮೂರ್ತಿ ಎಂಬುವರು ತಮ್ಮ ತಂದೆಯ ಪಿಂಚಣಿಗೆ ಸಂಬಂಧಿಸಿದಂತೆ 2ನೇ ಅಡಿಷನಲ್ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ಹಾಸನ ಕೋರ್ಟ್ನಲ್ಲಿ ದಾವೆ ಹೂಡಿದ್ದು, ಅವರು ಈ ವಿಳಾಸದಲ್ಲಿ ವಾಸವಾಗಿಲ್ಲವೆಂದು ಕೋರ್ಟ್ ನೋಟಿಸ್ ವಾಪಸ್ ಬಂದಿದೆ ಎಂದು ಜಿಲ್ಲಾ ಸರ್ಕಾರಿ ವಕೀಲರು ತಿಳಿಸಿದ್ದಾರೆ. ತಮ್ಮ ವಿಳಾಸಕ್ಕೆ ಸಂಬಂಧಿಸಿದಂತೆ, ಪತ್ರ ವ್ಯವಹರಿಸಲು ಜಿಲ್ಲಾ ಖಜಾನೆ, ಇವರ ಕಚೇರಿಯನ್ನಾಗಲಿ ಸಂಪರ್ಕಿಸಬೇಕೆಂದು ಖಜಾನಾಧಿಕಾರಿ ತಿಳಿಸಿದ್ದಾರೆ.