ಬಿ.ಹೊನ್ನೇನಹಳ್ಳಿಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಬಿ.ಹೊನ್ನೇನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕ್ಷೀರ ಭಾಗ್ಯ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಸಿ. ಶಂಕರಲಿಂಗೇಗೌಡ ಮಾತನಾಡಿ ಸರ್ಕಾರದ ಈ ಯೋಜನೆ ಉತ್ತಮವಾಗಿದ್ದು ಮಕ್ಕಳು ಆರೋಗ್ಯವಂತರಾಗಿದ್ದರೆ ಉತ್ತಮ ಓದಿಗೆ ಸಹಕಾರಿಯಾಗುತ್ತದೆ ಎಂದರು. ಹಾಲು ಕುಡಿಯುವ ಲೋಟದ ಹಾಗೂ ಪಾತ್ರೆಯ ಸ್ವಚ್ಚತೆಯ ಕಡೆ ಗಮನಹರಿಸಿ ಎಂದು ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಸೂಚಿಸಿದರು. ಈ ವಿಚಾರದಲ್ಲಿ ಲಕ್ಷ್ಯವಿಡಬೇಕೆಂದು ಬಿಹಾರ ರಾಜ್ಯದ ಬಿಸಿಯೂಟದ ಘಟನೆಯನ್ನು ನೆನಪಿಸಿದರು. ಶಿಕ್ಷಕರ ಜವಬ್ದಾರಿ ಹೆಚ್ಚಾಗುತ್ತಿದ್ದು ಶಾಲೆಯ ಮಕ್ಕಳನ್ನು ತಮ ಮಕ್ಕಳೆಂದು ಭಾವಿಸಿ ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಯ್ಯ, ಅರೋಗ್ಯ ಇಲಾಖೆಯ ಜಯಶೀಲ, ಶಾಲಾ ಶಿಕ್ಷಕರು ಮತ್ತಿತರರು ಇದ್ದರು.