ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಗರಸಭೆ ವ್ಯಾಪ್ತಿ ರಸ್ತೆ ಅಭಿವೃದ್ಧಿಗೆ 568 ಲಕ್ಷ ನಿಗದಿ

Rashmi Kasaragodu
Updated On : 8 Aug 2013, 12:08 pm

ಹಾಸನ: ಪ್ರಸಕ್ತ ಸಾಲಿಗೆ ಎಸ್.ಎಫ್.ಸಿ ಮುಕ್ತ ನಿಧಿಯಡಿ ಹಾಸನ ನಗರಸಭೆಗೆ 568.23 ಲಕ್ಷ ಅನುದಾನ ನಿಗದಿಪಡಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಅನುದಾನ ಕಾಯ್ದಿರಿಸಿದೆ ಎಂದು ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಉದ್ದಿಮೆಗಳ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ತಿಳಿಸಿದ್ದಾರೆ.
ಪಟೇಲ್ ಶಿವರಾಂ ಅವರು ಹಾಸನ ನಗರದ ರಸ್ತೆಗಳು ಹಾಳಾಗಿದ್ದು ಇವುಗಳನ್ನು ರಿಪೇರಿ ಮಾಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸದನದಲ್ಲಿ ಕೇಳಲಾದ ಪ್ರಶ್ನೆಗೆ ಈ ರೀತಿ ಸಚಿವರು ಉತ್ತರಿಸಿದ್ದಾರೆ.
ಹಾಸನ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಲು 2011-12 ನೇ ಸಾಲಿನ ಎಸ್.ಎಪ್.ಸಿ  ಮುಕ್ತನಿಧಿಯಡಿ 83.07  ರು.ಲಕ್ಷ, 2012-13 ನೇ  ಸಾಲಿನ ಎಸ್.ಎಪ್.ಸಿ ಮುಕ್ತನಿಧಿಯಡಿ 112.10 ಲಕ್ಷ ರು, 2009-10 ರಿಂದ 2011-12 ನೇ ಸಾಲಿಗೆ ಸಿ.ಎಂ.ಎಸ್.ಎಂ.ಟಿ.ಡಿ.ಪಿ ಮೊದಲನೇ ಹಂತ ಯೋಜನೆಯಡಿ ರೂ 1342-00 ಲಕ್ಷಗಳನ್ನು ಹಾಸನ ನಗರ ವ್ಯಾಪ್ತಿಯಲ್ಲಿನ ರಸ್ತೆಗಳ ಉನ್ನತೀಕರಣಕ್ಕಾಗಿ ಉಪಯೋಗಿಸಿಕೊಳ್ಳಲಾಗಿದೆ.
2011-12 ನೇ ಸಾಲಿಗೆ ಸಿ.ಎಂ.ಎಸ್. ಎಂ.ಟಿ.ಡಿ.ಪಿ- 2ನೇ ಹಂತ, ಯೋಜನೆಯಡಿ ರೂ 2400 ಲಕ್ಷಗಳ ಅನುದಾನವನ್ನು ರಸ್ತೆಗಳ ಅಭಿವೃದ್ಧಿ ಕ್ರಿಯಾಯೋಜನೆಗೆ ಅನುಮೋದನೆ ಪಡೆದು ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement