ಪಾಕ್ ಕೃತ್ಯ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಆ 7
ಕಾಶ್ಮೀರದ ಗಡಿಯಲ್ಲಿ ದೇಶದ ವೀರಯೋಧರನ್ನು ಮೋಸದಿಂದ ಕೊಂದ ಪಾಕಿಸ್ತಾನದ ಪಾಪಿ ಕೃತ್ಯವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ದೇಶದ ಮೇಲೆ ಪಾಕಿಸ್ತಾನ ಸೈನಿಕರು ಎಸಗಿರುವ ಈ ಕೃತ್ಯಕ್ಕೆ ಕೂಡಲೇ ಪ್ರತ್ಯೋತ್ತರವನ್ನು ನೀಡುವ ಮೂಲಕ 120 ಕೋಟಿ ಭಾರತೀಯರ ರಕ್ಷಣೆಗಾಗಿ ನಿಂತಿರುವ ಸೈನಿಕರ ಮನಸ್ಥೈರ್ಯವನ್ನು ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಗೌತಮ್, ಎಸ್.ಪಿ.ಗಂಗಾಧರ್, ದರ್ಶನ್, ಎಸ್.ಜೆ.ಕೃಷ್ಣ, ರಂಜಿತ್, ಚೇತನ್, ರಶ್ಮಿ, ಸೌಮ್ಯ, ಪೂರ್ಣಿಮಾ, ಕವಿತಾ, ರೇಖಾ, ಸುಮ, ರಂಜಿತ, ರೂಪ, ಸಹನ, ಸ್ವಾತಿ, ಪಲ್ಲವಿ, ಕೃತಿಕ, ಮಂಜುಳ, ಪ್ರಿಯಾಂಕ, ಸೌಜನ್ಯ ಹಾಗೂ ಇತರರು ಇದ್ದರು.